ಮಂಗಳೂರು : ಇತ್ತೀಚಿಗೆ ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು ಪ್ರಕರಣ ಸಂಬಂಧ ಪೊಲೀಸರು ಹಲವು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು ಅದರಲ್ಲಿ ಪ್ರಮುಖ ಆರೋಪಿ ನೌಷಾದ್ ಸಹ ಒಬ್ಬ. ಇದೀಗ ಚೋಟ್ಟೆ ನೌಷಾದ್ ಮೇಲೆ ಹಲ್ಲೆ ನಡೆಸಲಾಗಿದೆ.
ಹೌದು ಮಂಗಳೂರು ಸೆಂಟ್ರಲ್ ಜೈಲಿನ ಬಿ ಬ್ಯಾರಕ್ ನಲ್ಲಿರುವ ಸಹ ಕೈದಿಗಳು ನೌಷಾದ್ ಮೇಲೆ ಹಲ್ಲೆ ಮಾಡಿದ್ದಾರೆ. ಕಲ್ಲು ಮತ್ತು ಸಿಕ್ಕಸಿಕ್ಕ ವಸ್ತುಗಳಿಂದ ಸಹ ಕೈದಿಗಳು ದಾಳಿ ನಡೆಸಿದ್ದಾರೆ. ಹಲವು ಸಹ ಕೈದಿಗಳಿಂದ ಹಲ್ಲೆ ನಡೆಸಿದ್ದು ಅದೃಷ್ಟವಶಾತ್ ನೌಷಾದ್ ಪಾರಾಗಿದ್ದಾನೆ. ಹಿಂದೂ ಕಾರ್ಯಕರ್ತ ಸುಹಾಸ್ ಕೊಲೆ ಪ್ರಕರಣದ ಆರೋಪಿ ಚೊಟ್ಟೆ ನೌಷಾದ್ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯವಾಗಿತ್ತು.
ಈ ವೇಳೆ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಬಳಿಕ ಆರೋಪಿಯನ್ನು ಮೈಸೂರು ಜಲಿಗೆ ಶಿಫ್ಟ್ ಮಾಡಲು ಸಿದ್ಧತೆ ಮಾಡಿಕೊಟ್ಟಿದ್ದಾರೆ ಈ ವೇಳೆಯಲ್ಲಿ ಯಾರನ್ನು ನೋಡಬೇಕು ಅಂತ ಹೇಳಿದ್ದಾನೆ ಜೈಲಿನಲ್ಲಿ ಮತ್ತೋರ್ವ ಕೈದಿ ಭೇಟಿಯಾಗಿ ಪೊಲೀಸರು ಕರೆದುಕೊಂಡು ಬಂದಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ನೌಷಾದ್ ಮೇಲೆ ಸಹ ಕೈದಿಗಳು ಅಟ್ಯಾಕ್ ಮಾಡಿದ್ದಾರೆ. ಆದರೆ ಆರೋಪಿ ನೌಷಾದ್ ಪಾರಾಗಿದ್ದಾನೆ.