ಬೆಂಗಳೂರು : ಬೆಂಗಳೂರಿನಲ್ಲಿ ಮಳೆಯಿಂದ ಭಾರಿ ಅವಾಂತರಗಳು ಸೃಷ್ಟಿಯಾಗಿದ್ದು, ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ನದಿಯಂತೆ ಆಗಿವೆ. ಈ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ ಅವರು ಎಚ್ ಡಿ ಕುಮಾರಸ್ವಾಮಿ ಹಾಗೂ ಆರ್ ಅಶೋಕ್ ಸೇರಿದಂತೆ ಯಾರಾದರೂ ಬೆಂಗಳೂರು ಮಳೆ ಅವಾಂತರ ಕುರಿತಂತೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕುರಿತು ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿರುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ಎಚ್ ಡಿ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಕುಮಾರಸ್ವಾಮಿ ಸೇರಿ ಬಿಜೆಪಿಗರು ಕೂಡ ನಮ್ಮನ್ನು ಹಾಗೂ ನಮ್ಮ ಸರ್ಕಾರ ನೋಡಿ ಹತಾಶರಾಗಿದ್ದಾರೆ ಎಂದರು.
ನಮ್ಮ ಸಾಧನೆ ನೋಡಿ, ಅವಕಾಶ ಸಿಕ್ಕಿಲ್ಲ ಅಂತ ಎಚ್ ಡಿ ಕುಮಾರಸ್ವಾಮಿ ಅವರಿಗೆ ಹತಾಶೆ ಆಗಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ಸೇರಿ ಯಾರನ್ನಾದರೂ ಕರೆಯಿರಿ ಚರ್ಚಿಸೋಣ. ಚಾಲೆಂಜ್ ಮಾಡುತ್ತೇನೆ ಬನ್ನಿ ಡಿಬೇಟ್ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕ ಬಿಜೆಪಿಯವರನ್ನು ಚರ್ಚೆಗೆ ಆಹ್ವಾನಿಸಿದರು.
ಇನ್ನು ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ರಸ್ತೆಗಳು ಜಲಾವೃತ ಆಗಿರುವ ವಿಚಾರಕ್ಕೆ, ಕಾಮಗಾರಿಗೆ ಕೆಲವರು ಸ್ಟೇ ತಂದಿದ್ದಾರೆ. 198 ಸಮಸ್ಯೆ ಇರುವ ಸ್ಥಳ ಇದೆ. ಆ ಪೈಕಿ 165 ಕಡೆ ಕೆಲಸ ಮುಗಿದಿದೆ ಇನ್ನು 46 ಕಡೆ ಕಾಮಗಾರಿ ಆಗಬೇಕಿದೆ. ಇದೇ ವರ್ಷ ಒಳಚರಂಡಿ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.