ಕೊಪ್ಪಳ : ಕೊಪ್ಪಳದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಎಂಬಲ್ಲಿ ನಡೆದಿದೆ.
ಹೌದು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನಿರುಪಾಲಾಗಿದ್ದು, ಮೃತ ಬಾಲಕರನ್ನು, ಗಂಗಾವತಿ ನಿವಾಸಿಗಳಾದ ಪವನ್ (14) ಮತ್ತು ಗೌತಮ್ (15) ನೀರು ಪಾಲಾಗಿರುವ ಬಾಲಕರು ಎಂದು ತಿಳಿದುಬಂದಿದೆ. ಪವನ್ ಕುಮಾರ್ ಮೃತದೇಹ ಪತ್ತೆಯಾಗಿದ್ದು ಗೌತಮ್ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.
ಪೊಲೀಸರು, ಮೀನುಗಾರರು ಮತ್ತು ಸ್ಥಳೀಯ ನಿವಾಸಿಗಳು ಗೌತಮ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.ಈಜಲು ಹೋಗಿದ್ದಾಗ ನದಿ ನೀರಿನಲ್ಲಿ ಇಬ್ಬರು ಬಾಲಕರು ಕೊಚ್ಚಿ ಹೋಗಿದ್ದಾರೆ ಎಂದು ತಿಳಿದುಬಂಡೀ. ಘಟನೆ ಕುರಿತಂತೆ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.