ಬೆಂಗಳೂರು: ನಿನ್ನೆ ನಗರದ ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರು ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದ ಸ್ಥಳೀಯ ಮುಖಂಡ ಶಿವಕುಮಾರ್, ನಾಯ್ಡು ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕಾಂಗ್ರೆಸ್ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ .ಹ್ಯಾರಿಸ್ , ಸ್ಥಳೀಯ ಮಾಜಿ ಕಾರ್ಪೊರೇಟರ್ ಶ್ರೀನಿವಾಸ್ ರೆಡ್ಡಿ ಹಾಗೂ ಇನ್ನಿತರ ಗೂಂಡಾಗಳನ್ನು ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಶಾಸಕರ ವಾರ್ಡ್ ಭೇಟಿ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಶಿವಕುಮಾರ್ ನಾಯ್ಡು ರವರ ಮೇಲೆ ಏಕಾಏಕಿ ಸ್ವತಹ ಶಾಸಕರೇ ಈ ರೀತಿಯ ಹಲ್ಲೆಯನ್ನು ನಡೆಸಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಶಾಸಕರು ತಮ್ಮ ಹಾಗೂ ತಮ್ಮ ಮಗನ ಗೂಂಡಾ ವರ್ತನೆಗಳ ಮೂಲಕ ಶಾಂತಿನಗರ ರಿಪಬ್ಲಿಕ್ ನ್ನು ಮಾಡಲು ಪಕ್ಷವು ಎಂದಿಗೂ ಬಿಡುವುದಿಲ್ಲ. ಈಗಾಗಲೇ ಈ ಗೂಂಡಾ ಶಾಸಕರ ವಿರುದ್ಧ ನಾವು ಸಾಕಷ್ಟು ಹೋರಾಟವನ್ನು ಮಾಡಿದ್ದೇವೆ ಹಾಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸೀತಾರಾಮ ಗುಂಡಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ “ನಮ್ಮ ಪಕ್ಷದ ಮುಖಂಡ ಶಿವಕುಮಾರ್ ನಾಯ್ಡು ಇತ್ತೀಚೆಗೆ ಬ್ರಿಗೇಡ್ ರಸ್ತೆಯಲ್ಲಿ ಬಿಬಿಎಂಪಿ ಫುಟ್ಪಾತ್ ಅನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಬೃಹತ್ ಬಿಲ್ಡರ್ ರೊಬ್ಬರ ಹಗರಣವನ್ನು ಬಯಲಿಗಳಿದಿದ್ದರು. ಈ ರೀತಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಶಾಸಕರ ಹಾಗೂ ಅವರ ಕಡೆ ಗುಂಡಾಗಳು ಕಳೆದ ಹಲವು ದಿವಸಗಳಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿ ಪಕ್ಷವನ್ನು ಬೆಳೆಸುತ್ತಿದ್ದ ಶಿವಕುಮಾರ್ ನಾಯ್ಡು ರವರ ಮೇಲೆ ಸಾಕಷ್ಟು ಒತ್ತಡಗಳು ಹಾಗೂ ಬೆದರಿಕೆಯನ್ನು ಹಾಕುತ್ತಿದ್ದರು.
ಈಗ ಶಾಸಕರೇ ನೇರವಾಗಿ ಹಲ್ಲೆ ನಡೆಸಿರುವುದು ಶಾಂತಿಪ್ರಿಯ ಶಾಂತಿನಗರ ಮತದಾರರುಗಳಿಗೆ ಮಾಡಿರುವ ದ್ರೋಹ. ಈ ದುರ್ಘಟನೆ ನಡೆದು 20 ಗಂಟೆಗಳ ಆದರೂ ಸಹ ಪೊಲೀಸರು ಎಫ್ಐಆರ್ ಹಾಕದಿರಲು ಶಾಸಕ ಹ್ಯಾರಿಸ್ ತೀವ್ರ ಒತ್ತಡವನ್ನು ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರ ಬಳಿಯೂ ಸಹ ದೂರನ್ನು ಸಲ್ಲಿಸಿದ್ದೇವೆ. ಈ ಶಾಸಕರ ವಿರುದ್ಧ ಕೂಡಲೇ ದೂರನ್ನು ದಾಖಲಿಸಿ ಕೂಡಲೇ ಬಂದಿಸಿ ವಿಚಾರಣೆಗೊಳ ಪಡಿಸಬೇಕು ಹಾಗೂ ಶಿವಕುಮಾರ್ ನಾಯ್ಡುರವರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ” ಎಂದು ಅಗ್ರಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಪ್ರಕಾಶ್ ನೆಡುಂಗದಿ, ಹರಿಹರನ್ ,ಜಗದೀಶ್ ಚಂದ್ರ, ಅನಿಲ್ ನಾಚಪ್ಪ, ಶಶಿಧರ್ ಆರಾಧ್ಯ, ದೇವರಸಂ ಸೇರಿದಂತೆ ಇನ್ನಿತರ ನಾಯಕರುಗಳು ಭಾಗವಹಿಸಿದ್ದರು.
ಸಾರ್ವಜನಿಕರೇ ಗಮನಿಸಿ : ನಿಮ್ಮ `ಮೊಬೈಲ್’ ಕಳ್ಳತನವಾದ್ರೆ ಚಿಂತೆಬೇಡ, ಜಸ್ಟ್ ಈ ರೀತಿ ಮಾಡಿ.!