ಪಂಜಾಬ್ : ಭಾರತೀಯ ಸೇನೆ ಹಾಗೂ ಭಾರತದ ಗೌಪ್ಯತೆಯ ಕುರಿತಂತೆ ಇತ್ತೀಚಿಗೆ ಪಂಜಾಬ್ ನಲ್ಲಿ ಇಬ್ಬರು ಮಹಿಳಾ ಯೂಟ್ಯೂಬರ್ ಗಳನ್ನು ಅರೆಸ್ಟ್ ಮಾಡಲಾಗಿತ್ತು. ಜ್ಯೋತಿ ಮಲ್ಹೋತ್ರಾ ಹಾಗು ಗುಝಾಲ್ ಎನ್ನುವ ಮಹಿಳೆಯರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಭಾರತೀಯ ಸೇನೆಯ ಬಗ್ಗೆ ಪಾಕಿಸ್ತಾನದ ISI ಗೆ ಮಾಹಿತಿ ನೀಡುತ್ತಿದ್ದ ಇಬ್ಬರೂ ಗೂಢಚಾರಿಗಳನ್ನು ಪಂಜಾಬ್ ನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಪಂಜಾಬ್ ನಲ್ಲಿ ಮತ್ತೆ ಇಬ್ಬರು ಗೂಢಚಾರಿಗಳು ಅರೆಸ್ಟ್ ಆಗಿದ್ದು, ಪಾಕಿಸ್ತಾನದ ISI ಗೆ ಭಾರತದ ಸೇನೆಯ ಬಗ್ಗೆ ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಸೇನಾ ನೆಲೆಗಳ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ ಆರೋಪದ ಅಡಿ ಇಬ್ಬರು ಗೂಢಾಚಾರಿಗಳನ್ನು ಬಂಧಿಸಲಾಗಿದೆ. ಪಂಜಾಬ್ ಪೋಲಿಸರು ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.