ರಾಯಚೂರು : ಇಂದು ಬೆಳ್ಳಂಬೆಳಗ್ಗೆ ರಾಯಚೂರಿನಲ್ಲಿ ಭೀಕರವಾದ ಕೊಲೆ ನಡೆದಿತ್ತು. ಇದೀಗ ಯುವಕನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರ್ ಬಜಾರ್ ಠಾಣೆ ಪೋಲಿಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕರೀಂ, ಇಬ್ರಾಹಿಂ ಹಾಗೂ ಇಲಿಯಾಸ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಬಂಧಿತ ಪ್ರಮುಖ ಆರೋಪಿ ಕರೀಂ ಮಾಜಿ ಕೌನ್ಸಿಲರ್ ಒಬ್ಬರ ಸಂಬಂಧಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಇಡ್ಲಿ ತಿನ್ನುವಾಗ ಚಾಕುವಿನಿಂದ ಇರಿದು ಸಾದಿಕ್ ನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ನನಗೆ ಮರ್ಯಾದೆ ಕೊಡಬೇಕು. ಏರಿಯಾದಲ್ಲಿ ನಾನೇ ದೊಡ್ಡವನು. ನನಗೆ ಇಡ್ಲಿ ತಿನ್ನಿಸು ಅಂತ ಸಾದಿಕ್ ಗೆ ಕರೀಂ ಅವಾಜ್ ಹಾಕಿದ್ದಾನೆ.
ಈ ವೇಳೆ ಸಾದೀಕ್ ಇದನ್ನು ವಿರೋಧಿಸಿದ್ದಕ್ಕೆ ಕರೀಂ ಮತ್ತು ಆತನ ಸಹಚರರು ಸಾಧಿಕ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಆದರೆ ಗಾಂಜಾ ಮಾರಾಟ ಬೇಡ ಎಂದಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಸಾದೀಕ್ ತಂದೆ ಮಾಡಿದ್ದಾರೆ. ಈ ವಿಚಾರವಾಗಿ ಈ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದು ರಾಯಚೂರಿನ ಎಸ್ ಪಿ ಪುಟ್ಟಮಾದಯ್ಯ ಹೇಳಿಕೆ ನೀಡಿದರು.