ಯಾದಗಿರಿ : ಯಾದಗಿರಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕುರಿಗಾಹಿಗಳು ನೀರುಪಾಲಾಗಿರುವ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಬಳಿಯ ಬಸವಸಾಗರ ಜಲಯಾಶಯದ ಜೆಬಿಸಿ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ವಿಜಯಪುರ ಮೂಲದ ಜಟ್ಟೆಪ್ಪ (19) ಹಾಗೂ ಕರಿಯಪ್ಪ (19) ಮೃತ ದುರ್ದೈವಿಗಳು.
ಕುರಿ ಮೇಯಿಸಲು ಬಂದಿದ್ದಾಗ ಕಾಲುವೆಗೆ 6 ಮಂದಿ ಇಳಿದಿದ್ದರು. ಆರು ಕುರಿಗಾಹಿಗಳ ಪೈಕಿ ಇಬ್ಬರು ನೀರುಪಾಲಾಗಿದ್ದು, ಇಬ್ಬರು ಈಜಿ ದಡ ಸೇರಿದ್ದಾರೆ. ನೀರುಪಾಲಾದ ಇಬ್ಬರಿಗಾಗಿ ಶೋಧಕಾರ್ಯಾಚರಣೆ ನಡೆದಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.