ಬೆಂಗಳೂರು : ಭದ್ರಾಪುರದ ಹಕ್ಕಿಪಿಕ್ಕಿ ಕಾಲೋನಿ ಬಾಲಕಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವುದು FSL ವರದಿಯಲ್ಲಿ ದೃಢವಾಗಿದೆ. ಹೌದು ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಭದ್ರಾಪುರ ಗ್ರಾಮದಲ್ಲಿ ಇತ್ತೀಚಿಗೆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು.
ಇದೀಗ ಬಂದಂತಹ FSL ವರದಿಯ ಪ್ರಕಾರ ಬಾಲಕಿಯ ದೇಹದ ಮೇಲೆ ಯಾವುದೇ ಸುಟ್ಟ ಕಲೆಗಳು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ದಿವ್ಯಾಂಗ ಬಾಲಕಿಗೆ ರೈಲು ಬಡಿದಿರುವುದು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ನಿಖರವಾದ ಕಾರಣ ತಿಳಿಯಲಿದೆ. ಮೇ 11ರಂದು ಸಂಜೆ ಮನೆಯಿಂದ 14 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಮೇ 12ರಂದು ರೈಲ್ವೆ ಹಳಿ ಸಮೀಪ ಬಾಲಕಿಯ ಶವ ಪತ್ತೆಯಾಗಿತ್ತು.
ಭದ್ರಾಪುರ ಬಳಿ ರೈಲ್ವೆ ಹಳಿ ಸಮೀಪ ಬಾಲಕಿಯ ಮೃತ ದೇಹ ಪತ್ತೆಯಾಗಿತ್ತು. ಬಿಡದಿ ಠಾಣೆ ಪೊಲೀಸರು ಕೇಸ್ ದಾಖಲಿಸಿ ಕೊಂಡು ತನಿಖೆ ಅರಭಿಸಿದ್ದರು. ಬಾಲಕಿ ಕೊಲೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೀಗ FSL ವರದಿಯ ಆಧಾರದಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ನಿರ್ಧರಿಸಲಾಗಿದೆ. ಬಿಡದಿ ಠಾಣೆ ಪೊಲೀಸರು ಅತ್ಯಾಚಾರ ನಡೆದಿಲ್ಲವೆಂಬ ನಿರ್ಧಾರಕ್ಕೆ ಬಂದಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ : ಎಸ್.ಪಿ ಶ್ರೀನಿವಾಸ್ ಗೌಡ
ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿಯ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಒಂದು ಪ್ರಕರಣದಲ್ಲಿ ಯಾವುದೇ ಆರೋಪಿಯನ್ನು ಬಂಧಿಸಿಲ್ಲ ಎಂದು ರಾಮನಗರ ಎಸ್.ಪಿ ಶ್ರೀನಿವಾಸ ಗೌಡ ಹೇಳಿಕೆ ನೀಡಿದರು. ಪ್ರಕರಣ ಸಂಬಂಧ 10 ಜನರನ್ನು ವಿಚಾರಣೆ ಮಾಡಿದ್ದೆವು. ಆದರೆ ಈ ಒಂದು ಪ್ರಕರಣದಲ್ಲಿ ಯಾರದ್ದು ಪಾತ್ರವಿರಲಿಲ್ಲ. ಇದೀಗ ಎಫ್ ಎಸ್ ಎಲ್ ವರದಿ ಬಂದಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲವೆಂದು FSL ವರದಿ ನೀಡಿದೆ.
ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿನ ಕಾರಣ ತಿಳಿಯುತ್ತದೆ. ನಾವು ಸಹ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ದೇಹದ ಮೇಲೆ ಸುಟ್ಟಕಲಿಗಳಿವೆ ಎಂದು ಜಾಲತಾಣದಲ್ಲಿ ವದಂತಿ ಹಬ್ಬಿಸಲಾಗಿತ್ತು. ಇದೆಲ್ಲವೂ ಕಪೋಲ ಕಲ್ಪಿತ ಸುಳ್ಳು ಸುದ್ದಿ ಹರಡಿ ಕಾನೂನು ಸುವ್ಯವಸ್ಥೆಗೆ ತೊಂದರೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಮೇಲ್ನೋಟಕ್ಕೆ ರೈಲು ಬಡಿದು ಬಾಲಕಿ ಮೃತಪಟ್ಟಿರುವುದು ಕಂಡು ಬಂದಿದೆ. ಬಾಲಕಿ ಸಾವು ಪ್ರಕರಣ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ಎಸ್ ಪಿ ಶ್ರೀನಿವಾಸ ಗೌಡ ತಿಳಿಸಿದರು.
ಪ್ರಕರಣ ಹಿನ್ನೆಲೆ?
ಕಳೆದ ಮೇ 11 ರಂದು ರಾಮನಗರ ಜಿಲ್ಲೆಯ ಬಿಡದಿಯ ಸಮೀಪದಲ್ಲಿರುವ ಭದ್ರಾಪುರ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಸ್ಥಿತಿಯಲ್ಲಿ 14 ವರ್ಷದ ಬಾಲಕಿಯ ಮೃತದೇಹವೊಂದು ಪತ್ತೆಯಾಗಿತ್ತು. ಬಳಿಕ ಕುಟುಂಬಸ್ಥರು ಶವ ಇಟ್ಟುಕೊಂಡು ನ್ಯಾಯ ಸಿಗುವವರೆಗೂ ಶವಸಂಸ್ಕಾರ ಮಾಡಲ ಎಂದು ಪ್ರತಿಭಟನೆ ನಡೆಸಿದರು. ಇದೀಗ FSL ವರದಿಯ ಪ್ರಕಾರ ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವುದು ತಿಳಿದುಬಂದಿದೆ.