ಬಾಗಲಕೋಟೆ : ಈ ಸಾವು ಅನ್ನೋದು ಯಾರಿಗೆ ಯಾವಾಗ ಯಾವ ರೂಪದಲ್ಲಿ ಬರುತ್ತದೆ ಅನ್ನೋದು ಗೊತ್ತಾಗುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಂತೂ ಯುವಜನತೆಯಲ್ಲಿ ಹೃದಯಘಾತ ಎನ್ನುವುದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೀಗ ಬಾಗಲಕೋಟೆಯಲ್ಲಿ ಘೋರವಾದ ದುರಂತ ಸಂಭವಿಸಿದ್ದು ತಾಳಿ ಕಟ್ಟಿದ ತಕ್ಷಣವೇ ವರನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ನಡೆದಿದೆ.
ಹೌದು ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಹೃದಯಘಾತದಿಂದ ವರ ಸಾವನ್ನಪ್ಪಿದ್ದಾನೆ. ಮದುವೆ ಮಂಟಪದಲ್ಲಿ ಕುಸಿದು ಬಿದ್ದು ವರ ಪ್ರವೀಣ ಕುರ್ನೆ ಇದೀಗ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ತಾಳಿ ಕಟ್ಟಿದ ತಕ್ಷಣ ಪ್ರವೀಣ್ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿರುವ ನಂದೀಕೇಶ್ವರ ಕಲ್ಯಾಣ ಮಂಟಪದಲ್ಲಿ ವರ ಪ್ರವೀಣ್ ಕುರ್ನೆ ಸಾವನ್ನಪ್ಪಿದ್ದಾರೆ.
ತಾಳಿ ಕಟ್ಟಿದ ತಕ್ಷಣ ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಹೃದಯಘಾತದಿಂದ ಸಾವನ್ನಪ್ಪಿದ್ದರೆ. ಇಂದು ಪ್ರವೀಣ್ ಕುರ್ನೆಹಾಗೂ ಪೂಜಾ ವಿವಾಹ ಸಮಾರಂಭ ನಡೆದಿತ್ತು. ಪ್ರವೀಣ್ ಕುರ್ವೆ ಜಮಖಂಡಿ ತಾಲೂಕಿನ ಕುಂಬಾರಹಳ್ಳ ನಿವಾಸಿ ಎನ್ನಲಾಗಿದ್ದು ಮದುವೆ ಸಂಭ್ರಮದಲ್ಲಿದ್ದ ಪ್ರವೀಣ್ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.