ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಬೇಕರಿ ಅಂಗಡಿಗಳಿಗೆ ತಿನಿಸು ಸರಬರಾಜು ಮಾಡುವಂತ ವ್ಯಕ್ತಿಗೆ ದಾರಿಯಲ್ಲಿ ರೂ.6,500 ಹಣ ಸಿಕ್ಕಿದೆ. ಅದನ್ನು ಸಾಗರ ಟೌನ್ ಠಾಣೆಗೆ ತೆರಳಿ ಸಂಬಂಧಿಸಿದಂತವರಿಗೆ ತಲುಪಿಸುವಂತೆ ನೀಡಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ.
ಈ ಬಗ್ಗೆ ಕನ್ನಡ ನ್ಯೂಸ್ ನೌಗೆ ಮಾಹಿತಿ ಹಂಚಿಕೊಂಡ ಸಾಗರ ಟೌನ್ ಠಾಣೆ ಪಿಎಸ್ಐ ನಾಗರಾಜು ಅವರು, ಆರುಮುಖ ಎಂಬುವರು ಉಡುಪಿಯಿಂದ ಸಾಗರದ ವಿವಿಧ ಬೇಕರಿಗಳಿಗೆ ಬೇಕರಿ ತಿನಿಸು ಸರಬರಾಜು ಮಾಡುತ್ತಾರೆ. ಇಂದು ಮಾರಿಕಾಂಬಾ ದೇವಸ್ಥಾನದ ರಸ್ತೆಯ ಜೈಹಿಂದ್ ಸಮೀಪದ ದಾರಿಯಲ್ಲಿ ರೂ.6,500 ಹಣ ಸಿಕ್ಕಿದೆ. ಅದನ್ನು ಕಂಡು ಕೂಡಲೇ ಸಾಗರ ಟೌನ್ ಠಾಣೆಗೆ ತಂದು ಸಂಭವಿಸಿದವರಿಗೆ ನೀಡಲು ಮನವಿ ಮಾಡಿದ್ದಾರೆ ಎಂದರು.
ಆರಮುಖ ನೀಡಿರುವಂತ ರೂ.6,500 ಸಾಗರ ಟೌನ್ ಠಾಣೆಯಲ್ಲಿ ಇರುತ್ತದೆ. ಸಾಗರ ನಗರ, ತಾಲ್ಲೂಕಿನ ಜನರು ಯಾರಾದರೂ ಕಳೆದುಕೊಂಡಿದ್ದರೇ ಸೂಕ್ತ ದಾಖಲೆ, ಮಾಹಿತಿ ಒದಗಿಸಿ ಪಡೆಯಬಹುದು ಎಂದು ತಿಳಿಸಿದ್ದಾರೆ.
ಸೋ ಸಾಗರದ ಜನರು ಯಾರಾದರೂ ಮಾರಿಕಾಂಬಾ ರಸ್ತೆಯ ಜೈಹಿಂದ್ ಬೇಕರಿ ಸಮೀಪದಲ್ಲಿ ರೂ.6,500 ಕಳೆದುಕೊಂಡಿದ್ದರೇ ಸಾಗರ ಟೌನ್ ಠಾಣೆಗೆ ತೆರಳಿ ಸೂಕ್ತ ಮಾಹಿತಿ, ಹಣದ ದಾಖಲೆ ಇದ್ದರೇ ನೀಡಿ ಪಡೆಯಬಹುದಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು