ಉಡುಪಿ: ಸಾಲ, ಬಡತದ ಸುಳಿಗೆ ಸಿಲುಕಿದಂತ ತಂದೆಯೊಬ್ಬ, ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ತಂದೆ ಬಾವಿಗೆ ಹಾರಿದ್ದನ್ನು ಕಂಡಂತ ಪುತ್ರ, ಅಪ್ಪನನ್ನು ರಕ್ಷಣೆಗೆ ಹೋಗಿ, ತಾನೂ ಸಾವನ್ನಪ್ಪಿರುವಂತ ಧಾರುಣ, ಮನ ಕಲಕುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಬಡತನ ಮತ್ತು ಸಾಲದ ಕಾರಣ ಮನನೊಂದು ಅಂಕದಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಂತ ಮಾಧವ ದೇವಾಡಿಗ ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸಿದ್ದರು.
ಇಂದು ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ಮಾಧವ ದೇವಾಡಿಗ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಚಾರ ತಿಳಿದಂತ ಪುತ್ರ ಪ್ರಸಾದ್ ತಂದೆಯ ರಕ್ಷಣೆಗಾಗಿ ತಾನೂ ಬಾವಿಗೆ ಹಾರಿದ್ದಾನೆ. ಆದರೇ ಅಪ್ಪನನ್ನು ರಕ್ಷಿಸಲಾಗದೇ ತಂದೆ-ಮಗ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇನ್ನೂ ಮಾಧವ ದೇವಾಡಿಗ ಹಾಗೂ ಪುತ್ರ ಪ್ರಸಾದ್ ಬಾವಿಯ ನೀರಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದು ಕಂಡ ಪತ್ನಿ ತಾರಾ ದೇವಾಡಿಗ ಅವರು ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೇ ಅಷ್ಟರಲ್ಲಿ ಪತಿ, ಮಗ ಸಾವನ್ನಪ್ಪಿದ್ದರಿಂದ ರಕ್ಷಿಸಲಾಗದೇ ಬಾವಿಯಲ್ಲಿದ್ದಂತ ಪೈಪ್ ಹಿಡಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ, ಮಾಧವ ದೇವಾಡಿಗ, ಪ್ರಸಾದ್ ಶವನ್ನು ಬಾವಿಯಿಂದ ಹೊರತೆಗೆದಿದ್ದಾರೆ. ತಾರಾ ದೇವಾಡಿಗ ರಕ್ಷಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೆಎನ್‌ಯು ನಂತರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಟರ್ಕಿಶ್ ಅಂಗಸಂಸ್ಥೆಗಳೊಂದಿಗಿನ ಒಪ್ಪಂದ ಸ್ಥಗಿತ | Boycott Turkey