ಬೆಳಗಾವಿ : ಕರ್ನಲ್ ಸೋಫಿಯಾ ಖುರೆಷಿ ಪತಿಯ ಮನೆ ಮೇಲೆ ದಾಳಿ ಆಗಿದೆ ಎಂದು ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ ಆರೋಪಿ ಅನಿಸ್ ವುದ್ದಿನ್ ವಿರುದ್ಧ ಬೆಳಗಾವಿಯ ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ
ಹೌದು ನಿನ್ನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರಲ್ಲಿರುವ ಕರ್ನಲ್ ಸೋಫಿಯಾ ಖುರೆಷಿ ಪತಿಯ ಮನೆಯ ಮೇಲೆ ಆರ್‌ಎಸ್‌ಎಸ್ ಬೆಂಬಲಿತ ಹಿಂದೂ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಅನೀಸ್ ಉದ್ದಿನ್ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ. ಟ್ವಿಟ್ಟರ್ ಖಾತೆಯಲ್ಲಿ ಅನೀಸ್ ಉದ್ದಿನ್ ಸುಳ್ಳು ಸುದ್ದಿಯನ್ನು ಹರಡಿಸಿದ್ದ. ಯಾವುದೋ ಒಂದು ಫೋಟೋ ಬಳಸಿ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ.
ಕೂಡಲೇ ಬೆಳಗಾವಿ ಪೊಲೀಸರು ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ. ಕೆನಡಾದಲ್ಲಿ ಕುಳಿತು ಅನಿಸ್ ಉದ್ದಿನ್ ಈ ಒಂದು ಪೋಸ್ಟ್ ಮಾಡಿದ್ದ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ ಪಿ ಭೀಮಶಂಕರ್ ಗುಳೇದ್ ಅವರು FIR ದಾಖಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರ ಸೂಚನೆಯ ಮೇರೆಗೆ ಇದೀಗ ಅನೀಸ್ ಉದ್ದಿನ್ ವಿರುದ್ಧ ಸನ್ ಠಾಣೆಯಲ್ಲಿ ದಾಖಲಾಗಿದೆ 353(2) 192ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಸ್ವಯಂ ಪ್ರೇರಿತವಾಗಿ ಅನೀಸ್ ಉದ್ದಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.