ತುಮಕೂರು : ಮೇ 10 ರಂದು ತುಮಕೂರು ಜಿಲ್ಲೆಯ ಹೆಬ್ಬುರಿನ ತಿಮ್ಮಸಂದ್ರ ಗ್ರಾಮದಲ್ಲಿ ಕರೆಂಟ್ ಶಾಕ್‌ನಿಂದ ಫ್ಯಾಕ್ಟರಿಯಲ್ಲಿ ಮೃತಪಟ್ಟಿದ್ದಾರೆಂದು ಬಿಂಬಿಸಲಾಗಿತ್ತು. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಪೊಲೀಸ್ ತನಿಖೆ ವೇಳೆ ಇದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಎಂಬುದು ಗೊತ್ತಾಗಿದೆ.
ಸದ್ಯ ಸಿಸಿಟಿವಿ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ, ಮಗನಿಂದಲೇ ಹತ್ಯೆ ನಡೆದಿರುವುದು ತಿಳಿದುಬಂದಿದೆ. ಆದರೆ ಮಗ ತಂದೆಯನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆಯ ವೇಳೆ ತಿಳಿದು ಬಂದಿದೆ.ಐಸ್ ಕ್ರಿಮ್ ಮಾಲೀಕ ನಾಗೇಶ್ (58) ಮೃತ ದುರ್ದೈವಿ.ಫ್ಯಾಕ್ಟರಿಯಲ್ಲಿ ಇಟ್ಟಿದ್ದ ಹಣವನ್ನು ನಾಗೇಶ್ ಅವರ ಪುತ್ರ ಸೂರ್ಯ ತೆಗೆದುಕೊಳ್ಳುತ್ತಿದ್ದ.
ತಂದೆಗೆ ಕಾಣದಂತೆ ಪದೇ ಪದೇ ಹಣ ತೆಗೆದುಕೊಳ್ಳುತ್ತಿದ್ದ. ಇದು ನಾಗೇಶ್‌ಗೆ ಗೊತ್ತಾದ ಬಳಿಕ ಮಗನ ಜೊತೆ ಜಗಳವಾಯಿತು.ಇನ್ನೊಂದೆಡೆ ಸೂರ್ಯನ ತಂಗಿಯನ್ನ ಲವ್ ಸಂಜಯ್ ಎಂಬಾತ ಪ್ರೀತಿ ಮಾಡುತ್ತಿದ್ದ. ಸಂಜಯ್ ಲವ್‌ಗೆ ಸೂರ್ಯನೇ ಸಪೋರ್ಟ್ ಮಾಡಿದ್ದ. ಈ ವಿಚಾರಕ್ಕೂ ನಾಗೇಶ್ ವಿರೋಧ ವ್ಯಕ್ತಪಡಿಸಿದ್ದರು. ಸಂಜಯ್ ಮನೆಗೆ ಬರುವುದಕ್ಕೆ ನಾಗೇಶ್ ವಿರೋಧ ವ್ಯಕ್ತಪಡಿಸಿದ್ದರು. ಒಮ್ಮೆ ಮನೆ ಬಳಿ ಬಂದಾಗ ಎಚ್ಚರಿಕೆಯನ್ನೂ ನೀಡಿದ್ದರು.
ನಾಗೇಶ್ ಹತ್ಯೆಗೆ ಎರಡು ಬಾರಿ ಸೂರ್ಯ ಹಾಗೂ ಸಂಜಯ್ ಕೊಲೆಗೆ ಯತ್ನಿಸಿದ್ದರು. ಒಂದು ಸಲ ಅಪಘಾತ ಮಾಡಿಸಿ ಕೊಲೆ ಯತ್ನಿಸಿದ್ದರು. ಅಪಘಾತದಲ್ಲಿ ನಾಗೇಶ್ ಬಚಾವ್ ಆಗಿದ್ದರು. ಚಿತ್ರದುರ್ಗದಲ್ಲಿ ನಾಗೇಶ್ ಮೇಲೆ ಹಲ್ಲೆ ನಡೆಸಲಾಗಿತ್ತು. ಅಲ್ಲಿಯೂ ನಾಗೇಶ್ ಬಚಾವ್ ಆಗಿದ್ದರು. ಇದೀಗ ಫ್ಯಾಕ್ಟರಿಯಲ್ಲಿ ಕೊಲೆ ಮಾಡಿದ್ದಾರೆ. ಬಳಿಕ ನಮ್ಮ ತಂದೆ ವಿದ್ಯುತ್ ಶಾಕ್ ನಿಂದ ಸಾವನಪ್ಪಿದ್ದಾರೆ ಎಂದು ಘತೆ ಕೂಡ ಕಟ್ಟಿದ್ದಾರೆ ಇದೀಗ ಪುತ್ರ ಸೂರ್ಯನನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ಮಾಹಿತಿ ಹೊರಬಿದ್ದಿದೆ.