ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಸದಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ(NHM) ಗುತ್ತಿಗೆಯಾಧಾರದ ಮೇಲೆ ನೇಮಕಗೊಳ್ಳುವಂತ ವೈದ್ಯರು, ಸ್ಟಾಫ್ ನರ್ಸ್ ಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಅದೇ ಈ ಹಿಂದೆ ಇದ್ದಂತ ವೇತನವನ್ನು ಪರಿಷ್ಕರಿಸಿದೆ. ಶೇ.25ರಷ್ಟು ವೇತನವನ್ನು ಹಚ್ಚಳ ಮಾಡಿದೆ.
ಇಂದು ಪತ್ರಿಕಾ ಗೋಷ್ಠಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು ಹಾಗೂ SNCU & ICU ದಲ್ಲಿ ಕಾರ್ಯ ನಿರ್ವಹಿಸುವ ಸ್ಟಾಫ್ ನರ್ಸ್ ಗಳ ವೇತನ ಪರಿಷ್ಕರಿಸಿ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಸದರಿ ಹುದ್ದೆಗಳು NHM ಯೋಜನೆಯಡಿ ಈ ಕೆಳಕಂಡಂತೆ ಮಂಜೂರಾಗಿರುತ್ತವೆ ಎಂದಿದ್ದಾರೆ.
- ಸ್ಟಾಫ್ ನರ್ಸ್ – 9041
- ಎಬಿಬಿಎಸ್ ವೈದ್ಯರು – 1398
- ತಜ್ಞ ವೈದ್ಯರು- 899
NHM ಯೋಜನೆಯಡಿ ಎಂಬಿಬಿಎಸ್ ಹಾಗೂ ತಜ್ಞ ವೈದ್ಯರ ವೇತನ ಕಡಿಮೆಯಿರುವ ಕಾರಣ ಅನೇಕ ವೈದ್ಯರ ಹುದ್ದೆಗಳು ಖಾಲಿ ಉಳಿದಿದ್ದು ನೇಮಕಾತಿ ಪ್ರಕ್ರಿಯೆಗೆ ಕ್ರಮ ವಹಿಸಲಾಗಿದ್ದರೂ ಸಹ ವೇತನ ಕಡಿಮೆ ಇರುವ ಕಾರಣದಿಂದ ವೈದ್ಯರು ಆಸಕ್ತಿ ತೋರದೇ ಇರುವುದರಿಂದ ಅನೇಕ ವೈದ್ಯರ ಹುದ್ದೆಗಳು ದೀರ್ಘ ಸಮಯದಿಂದ ಖಾಲಿ ಉಳಿದಿರುತ್ತವೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ವತಿಯಿಂದ ಈ ಸಂಬಂಧ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಿದ ಮೇರೆಗೆ NHM Supplementary RoP 2024-26 ಯಲ್ಲಿ ಈ ಕೆಳಕಂಡಂತೆ ವೇತನವನ್ನು ಹೆಚ್ಚಳಮಾಡಿ ಅನುಮೋದನೆ ನೀಡಲಾಗಿರುತ್ತದೆ ಎಂದಿದ್ದಾರೆ.
- ಸ್ಟಾಫ್ ನರ್ಸ್ ವೇತನವನ್ನು ರೂ.14,186 ರಿಂದ 17,774 ಇದ್ದದ್ದನ್ನು ರೂ.22,000ಕ್ಕೆ ಹೆಚ್ಚಿಸಲಾಗಿದೆ.
- ಎಬಿಬಿಎಸ್ ವೈದ್ಯರ ವೇತನವನ್ನು ರೂ.46,895 ರಿಂದ 50,000 ಇದ್ದದ್ದು ರೂ.60,000ಕ್ಕೆ ಹೆಚ್ಚಳ
- ತಜ್ಞ ವೈದ್ಯರ ವೇತನವನ್ನು ರೂ.1,10,000 ದಿಂದ 1,30,000 ಇದ್ದದ್ದು ರೂ.1,40,000ಕ್ಕೆ ಪರಿಷ್ಕರಿಸಲಾಗಿದೆ.
Major Clinical Specialist ((OBG, Paediatric, Anaesthesia, General Medicine, Ortho, Surgeon, Ophthalmologist) ಹುದ್ದೆಗೆ ಆರಂಭಿಕ ವೇತನ ರೂ. 1,40,000.00 ನಿಗದಿಯಾಗಿದ್ದು, ಅನುಭವ ಹೊಂದಿರುವ ಅಭ್ಯರ್ಥಿಗಳು ಆಯ್ಕೆಯಾದಲ್ಲಿ, ಪ್ರತಿ ವರ್ಷದ ಅನುಭವಕ್ಕೆ 2.5 % ರಷ್ಟು ಹೆಚ್ಚುವರಿ ವೇತನವನ್ನು ಸಹ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಪರಿಷ್ಕರಿಸಲ್ಪಟ್ಟ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುತ್ತಿದ್ದು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿಯಲ್ಲಿಯೇ ಮಂದುವರಿಯುತ್ತಾರೆ. ಈ ನೌಕರರು ರಾಜೀನಾಮೆ ಸಲ್ಲಿಸಿ, ಹೊಸ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ. ಹೊಸ ನೇಮಕಾತಿ ಮಾಡುವ ಸಂದರ್ಭದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅವರ ಅನುಭವದ ಆಧಾರದ ಮೇಲೆ (ಪ್ರತಿ ವರ್ಷದ ಅನುಭವಕ್ಕೆ 2 ಅಂಕಗಳು) ಆದ್ಯತೆ ನೀಡುವುದು ಎಂದು ತಿಳಿಸಿದ್ದಾರೆ.
ಸದರಿ ವೇತನ ಹೆಚ್ಚಳದಿಂದ ಅನೇಕ ವೈದ್ಯರು NHM ಅಡಿಯಲ್ಲಿ ನೇಮಕವಾಗುವ ಸಾಧ್ಯತೆಯಿದ್ದು ಇದರಿಂದ ತಾಯಿ ಮಕ್ಕಳ ಆರೋಗ್ಯ ಶಸ್ತ್ರಚಿಕಿತ್ಸೆ, ಒಳ ಹಾಗೂ ಹೊರರೋಗಿಗಳ ಸೇವೆ ಉತ್ತಮವಾಗಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
BREAKING : ಇನ್ಮುಂದೆ ಸರ್ಕಾರದಿಂದಲೇ ‘108 ಆಂಬುಲೆನ್ಸ್’ ಸೇವೆ : ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ