ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಬಾಲಕಿಯನ್ನು ಪುಸಲಾಯಿಸಿ, ನಗರ ಹೊರವಲಯದ ಪ್ರದೇಶಕ್ಕೆ ಕರೆದೊಯ್ದ ಮೂವರು ಬಾಲಕರು ಪಾರ್ಟಿ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಮೇ 6ರಂದು ನಡೆದಿದ್ದು, ಸೋಮವಾರ ಬಾಲಕಿಯ ಪಾಲಕರು ಠಾಣೆಗೆ ದೂರು ನೀಡಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಇಬ್ಬರು ಬಾಲಕರನ್ನು ಅರೆಸ್ಟ್ ಮಾಡಿ ಬಾಲ ಮಂದಿರಕ್ಕೆ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿತರು ಬಾಲಕಿಯ ಮನೆಯ ಸುತ್ತಮುತ್ತಲು ಕೆಲಸ ಮಾಡಿಕೊಂಡು ಇದ್ದರು.
ಈ ವೇಳೆ ಬಾಲಕಿಯನ್ನು ಪುಸಲಾಯಿಸಿ ಪ್ರೀತಿ ಪ್ರೇಮದ ನಾಟಕವಾಡಿದ್ದಾರೆ. ಬಳಿಕ ಮೇ 6ರಂದು ನಗರ ಹೊರವಲಯದ ಪ್ರದೇಶಕ್ಕೆ ಹೋಗಿ ಎಲ್ಲರೂ ಪಾರ್ಟಿ ಮಾಡಿದ್ದರು. ನಂತರ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಿನ್ನೆ ಬಾಲಕಿಯ ಪೋಷಕರು ಘಟನೆ ಬೆಳಕಿಗೆ ಬಂದಾಗ ಠಾಣೆಗೆ ದೂರು ನೀಡಿದ್ದಾರೆ. ಹಾಗಾಗಿ ಪೊಲೀಸರು ಇಬ್ಬರು ಬಾಲಕರನ್ನು ಅರೆಸ್ಟ್ ಮಾಡಿ ಬಾಲಮಂದಿರಕ್ಕೆ ಕಳಿಸಿದ್ದು, ಇನ್ನೋರ್ವ ಬಾಲಕನಿಗೆ ಹುಡುಕಾಟ ನಡೆಸಿದ್ದಾರೆ.