ಬೆಂಗಳೂರು: ನೀವು ಬಾಡಿಗೆ ಮನೆಯಲ್ಲಿದ್ದರೂ, ಮನೆ ಬದಲಿಸಿದ ನಂತ್ರ, ಹೊಸದಾಗಿ ತೆರಳಿದಂತ ಬಾಡಿಗೆ ಮನೆಗೂ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಹಾಗಾದ್ರೆ ಅದು ಹೇಗೆ ಅಂತ ಮುಂದೆ ಓದಿ.
ಈ ಬಗ್ಗೆ ಬೆಸ್ಕಾಂ ಮಾಹಿತಿ ಹಂಚಿಕೊಂಡಿದ್ದು, ನೀವು ಮನೆ ಬದಲಾಯಿಸಿದಲ್ಲಿ, ಹಳೆಯ ಮನೆಯ ಆರ್ ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಹೊಸ ಮನೆಯ ಆರ್ ಆರ್ ಸಂಖ್ಯೆಗೂ ಗೃಹ ಜ್ಯೋತಿ ಸೌಲಭ್ಯ ಪಡೆದುಕೊಳ್ಳಿ ಅಂತ ತಿಳಿಸಿದೆ.
ಡಿ-ಲಿಂಕ್ ಮಾಡುವುದು ಹೇಗೆ.?
- ಮನೆ ಬದಲಿಸಿ ಹೊಸ ಮನೆಗೆ ತೆರಳಿದಾಗ ವಿದ್ಯುತ್ ಗ್ರಾಹಕರು https://sevasindhugs.karnataka.gov.in/ ಜಾಲ ತಾಣಕ್ಕೆ ಭೇಟಿ ನೀಡಬೇಕು.
- ಹಳೆಯ ಮನೆಯ ಆರ್ ಆರ್ ಸಂಖ್ಯೆಯನ್ನು ಇಲ್ಲಿ ಕೇಳುವ ಮಾಹಿತಿ ನೀಡಿ ಡಿ-ಲಿಂಕ್ ಮಾಡಿ.
- ಆ ಬಳಿಕ ಹೊಸ ಮನೆಯ ಆರ್ ಆರ್ ಲಿಂಕ್ ನಮೂದಿಸಿ ಗೃಹ ಜ್ಯೋತಿಗೆ ಲಿಂಕ್ ಮಾಡಬಹುದಾಗಿದೆ.
ಅಂದಹಾಗೇ ರಾಜ್ಯಾಧ್ಯಂತ ಈ ಮಾದರಿಯ 2,83,291 ಡಿ-ಲಿಂಕ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲೇ 2,14,456 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ.
ಮನೆ ಬದಲಾಯಿಸಿದ ಮೇಲೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಡಿ-ಲಿಂಕ್ ವ್ಯವಸ್ಥೆ ಇದೀಗ ಮತ್ತಷ್ಟು ಸುಲಭ
ನೀವೂ ಈ ಕೆಳಗೆ ನೀಡಿರುವ ಲಿಂಕ್‌ಗಳ ಮೂಲಕ ನೋಂದಾಯಿಸಿಕೊಳ್ಳಿ ಹಾಗೂ ಈ ಸೌಲಭ್ಯ ಪಡೆಯಿರಿ.
ಸೇವಾಸಿಂಧು ಗ್ಯಾರೆಂಟಿ ಸ್ಕೀಮ್ ಪೋರ್ಟಲ್https://t.co/bsGvzlXT4x
ಅಥವಾ https://t.co/6H4Kymeims #BESCOM #GruhaJyothiScheme… pic.twitter.com/vi8EOmmgHl— Namma BESCOM | ನಮ್ಮ ಬೆಸ್ಕಾಂ (@NammaBESCOM) May 13, 2025
ಆಪರೇಷನ್ ಕೆಲ್ಲರ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಎನ್ ಕೌಂಟರ್ ಗೆ ಮೂವರು ಉಗ್ರರು ಬಲಿ
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಹೀಗಿವೆ ಕರ್ನಾಟಕದ ಸೈಬರ್ ಪೊಲೀಸ್ ಠಾಣೆಗೆ ದೂರವಾಣಿ ಸಂಖ್ಯೆ