ಪಂಜಾಬ್ : ಮದ್ಯ ಸೇವನೆ ಮಾಡೋದೇ ತಪ್ಪು ಆದರೂ ಕೆಲವರು ಫ್ಯಾಷನ್ ಗಾಗಿ ಮದ್ಯ ಸೇವಿಸಿದರೆ, ಇನ್ನು ಕೆಲವರು ಒತ್ತಡದಿಂದ ಮದ್ಯ ಸೇವಿಸುತ್ತಾರೆ. ಇನ್ನು ಕೆಲವು ಜನರಂತೂ ಮದ್ಯದಲ್ಲೇ ಈಜಾಡುತ್ತಿರುತ್ತಾರೆ. ಇತ್ತೀಚಿಗೆ ಮದ್ಯದಲ್ಲೂ ಕೆಮಿಕಲ್ ಮಿಶ್ರಿತ ಮದ್ಯ ಮಾರಾಟ ಆಗುತ್ತಿದ್ದು, ಪಂಜಾಬ್ ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಜನ ಬಲಿಯಾಗಿದ್ದಾರೆ.
ಹೌದು ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಅಮೃತಸರದ ಮಜಿತಿಯಾ ಪ್ರದೇಶದಲ್ಲಿ ನಡೆದಿದೆ. ನಿನ್ನೆ ಸಂಜೆಯಿಂದ ಸಾವುಗಳ ಸರಣಿ ಪ್ರಾರಂಭವಾಗಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಪಂಜಾಬ್ ನ ಥೆರ್ವಾಲ್, ಮರ್ರಿ, ಪಟಲ್ ಪುರಿ, ಭಂಗಾಲಿ ಗ್ರಾಮಗಳಿಂದ ಇದುವರೆಗೂ 12 ಸಾವುಗಳು ವರದಿಯಾಗಿದೆ. ಪಂಜಾಬ್ ನಲ್ಲಿ ವಿಷಪೂರಿತ , ಅಕ್ರಮ ಮದ್ಯದ ಹಾವಳಿ ಹೆಚ್ಚಾಗಿದ್ದು ಅದನ್ನು ತಡೆಗಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆ ಕುರಿತಂತೆ ತನಿಖೆ ಜಾರಿಯಲ್ಲಿದೆ.