ನವದೆಹಲಿ : ಆಪರೇಷನ್ ಸಿಂಧೂರ್ ದಾಳಿ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು. ವಿಜ್ಞಾನಿಗಳಿಗೆ ಸೈನಿಕರಿಗೆ ನಾನು ಸೆಲ್ಯೂಟ್ ಹೇಳುತ್ತೇನೆ. ಆಪರೇಷನ್ ಸಿಂಧೂರವನ್ನು ಸೈನಿಕರು ಯಶಸ್ವಿಗೊಳಿಸಿದ್ದಾರೆ. ದೇಶದ ಪ್ರತಿ ತಾಯಿ ಮತ್ತು ಸಹೋದರಿಯರಿಗೂ ಈ ಪರಾಕ್ರಮ ಸಮರ್ಪಣೆ. ಪಾಕಿಸ್ತಾನದ ಉಗ್ರ ಸ್ಥಾನಗಳನ್ನು ಶುದ್ಧ ಮಾಡುವವರೆಗೂ ಯಾವುದೇ ಶಾಂತಿಯ ಮಾತಿಲ್ಲ ಎಂದು ಎಚ್ಚರಿಕೆ ನೀಡಿದರು.
ನೀರು ಮತ್ತು ರಕ್ತ ಒಂದೇ ಹಾದಿಯಲ್ಲಿ ಹರಿಯುವುದಿಲ್ಲ. ಹಾಗೆಯೇ ವ್ಯಾಪಾರ ಮತ್ತು ಉಗ್ರವಾದ ಜೊತೆಯಾಗಿರಲು ಸಾಧ್ಯವಿಲ್ಲ. ಭಯೋತ್ಪಾದನೆ ನಿಲ್ಲಿಸದಿದ್ದರೆ, ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ. ಯಾವುದೇ ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ನಾವು ಹೆದರಲ್ಲ ಉಗ್ರರು, ಉಗ್ರರಿಗೆ ಬೆಂಬಲ ನೀಡುವವರು ಇಬ್ಬರೂ ಒಂದೇ. ಆಪರೇಷನ್ ಸಿಂಧೂರ್ ಒಂದು ಮಾನದಂಡ ರೂಪಿಸಿದೆ. ಮೇಡ್ ಇನ್ ಇಂಡಿಯಾ ರಕ್ಷಣಾ ವ್ಯವಸ್ಥೆಯ ಸಮಯ ಬಂದಿದೆ. ಪಾಕಿಸ್ತಾನ ಬದುಕಬೇಕು ಅಂದರೆ ಉಗ್ರವಾದ ನಿಲ್ಲಿಸಬೇಕು ಭಯೋತ್ಪಾದನೆ ನಿಲ್ಲಿಸದಿದ್ದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ. ಪಾಕಿಸ್ತಾನದ ಉಗ್ರ ಸ್ಥಾನಗಳನ್ನು ಶುದ್ಧ ಮಾಡಲೇಬೇಕು. ಅಲ್ಲಿಯವರೆಗೆ ಶಾಂತಿಯ ಯಾವುದೇ ಮಾತು ಇಲ್ಲ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿಯವರು ನೇರವಾಗಿ ಎಚ್ಚರಿಕೆ ನೀಡಿದರು.
ಪಹಲ್ಗಾಮ್ ನಲ್ಲಿ 26 ಅಮಾಯಕರನ್ನು ಹತ್ಯೆಗೈದ ಬಳಿಕ ಉಗ್ರರು ಆರಾಮಾಗಿ ಓಡಾಡಿಕೊಂಡಿದ್ದರು. ದಾಳಿಯ ಮಾಸ್ಟರ್ ಮೈಂಡ್ ಗಳು ಆರಾಮಾಗಿ ಓಡಾಡಿಕೊಂಡಿದ್ದರು. ನಾವು ಒಬ್ಬೊಬ್ಬ ಉಗ್ರರನ್ನು ಹುಡುಕಿ ಕೊಂದಿದ್ದೇವೆ. ಪಾಕಿಸ್ತಾನದ ಕ್ಷಿಪಣಿ ಡ್ರೋನ್ ಗಳನ್ನು ಹೊಡೆದು ಹಾಕಿದ್ದೇವೆ. ಭಾರತ ನೇರವಾಗಿ ಪಾಕಿಸ್ತಾನದ ಹೃದಯಕ್ಕೆ ಹೊಡೆದಿದೆ. ನಮ್ಮ ಕ್ಷಿಪಣಿಗಳು ಅತ್ಯಂತ ನಿಖರವಾಗಿ ದಾಳಿ ಮಾಡಿವೆ. ಪಾಕಿಸ್ತಾನ ಗಡಿಯಲ್ಲಿ ಯುದ್ಧಕ್ಕೆ ಸಿದ್ಧವಾಗಿತ್ತು.
ಆದರೆ ಭಾರತ ಅವರ ತಲೆಯ ಮೇಲೆಯೇ ಹೊಡೆದಿದೆ. ನಾವು ಉಗ್ರರ ಕೇಂದ್ರ ಸ್ಥಾನಗಳನ್ನು ದ್ವಂಸಗೊಳಿಸಿದ್ದೇವೆ. ಡ್ರೋನ್ ಗಳಿಂದ ಪಾಕಿಸ್ತಾನ ಏರ್ ಬೇಸ್ ಗಳ ಮೇಲೆ ಭಾರತದ ದಾಳಿ ಮಾಡಿದೆ. ಜಗತ್ತು ನೋಡಿದೆ ಹೇಗೆ ಪಾಕಿಸ್ತಾನ ಡ್ರೋನ್ ಗಳು ಮೆಸೇಲ್ ಗಳು ತರಗೆಲೆಗಳಂತೆ ಉದುರಿ ಹೋಗಿದ್ದಾವೆ ಎನ್ನುವುದನ್ನು ನೋಡಿದೆ. ಪಾಕಿಸ್ತಾನ ನಮ್ಮನ್ನು ಕಾಪಾಡಿ ಎಂದು ಜಗತ್ತಿನ ಮುಂದೆ ಅಂಗಲಾಚಿತ್ತು. ನಮ್ಮ ದಾಳಿಗೆ ಹೆದರಿದ ಪಾಕಿಸ್ತಾನ ಜಗತ್ತಿನ ಮುಂದೆ ಕಣ್ಣೀರು ಹಾಕಿದೆ.
ನಮ್ಮ ಬಿಎಸ್ಎಫ್ ಅರೆ ಸೇನಾಪಡೆ ಫುಲ್ ಅಲರ್ಟ್ ಆಗಿದೆ. ಮೇ 10 ರಂದು ಪಾಕಿಸ್ತಾನ ಸೇನೆ ಭಾರತದ DGMO ಗೆ ಸಂಪರ್ಕಿಸಿತ್ತು. ಅಲ್ಲಿಯವರೆಗೂ ಉಗ್ರವಾದಿಗಳ ಸ್ಥಳಗಳನ್ನು ದ್ವಂಸಗೊಳಿಸಿದ್ದೇವೆ. ಸೈನ್ಯ ದುಸಾಹಸ ತೋರಿಸಬಾರದು ಅಂತ ಹೇಳಿದ್ವಿ. ಆಪರೇಷನ್ ಸಿಂಧೂರ್ ಮುಗಿದಿಲ್ಲ ಸದ್ಯಕ್ಕೆ ನಿಂತಿದೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಬಳಿಕ ಇದೀಗ ಆಪರೇಷನ್ ಸಿಂಧೂರ್ ನಡೆದಿದೆ. ಉಗ್ರವಾದ ಮತ್ತೆ ನಡೆದರೆ ನಮ್ಮದೇ ರೀತಿಯಲ್ಲಿ ಉತ್ತರಿಸುತ್ತೇವೆ. ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ಭಾರತ ಬಗ್ಗುವುದಿಲ್ಲ ಈ ಬೆದರಿಕೆ ನಾವು ಸರಿಯಾದ ಉತ್ತರವನ್ನೇ ಕೊಡುತ್ತೇವೆ ಎಂದು ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ ನೀಡಿದರು.