ನವದೆಹಲಿ : ಆಪರೇಷನ್ ಸಿಂಧೂರ್ ದಾಳಿ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು. ವಿಜ್ಞಾನಿಗಳಿಗೆ ಸೈನಿಕರಿಗೆ ನಾನು ಸೆಲ್ಯೂಟ್ ಹೇಳುತ್ತೇನೆ. ಆಪರೇಷನ್ ಸಿಂಧೂರವನ್ನು ಸೈನಿಕರು ಯಶಸ್ವಿಗೊಳಿಸಿದ್ದಾರೆ. ದೇಶದ ಪ್ರತಿ ತಾಯಿ ಮತ್ತು ಸಹೋದರಿಯರಿಗೂ ಈ ಪರಾಕ್ರಮ ಸಮರ್ಪಣೆ ಎಂದು ತಿಳಿಸಿದರು.
ಏಪ್ರಿಲ್ 22ರಂದು ಉಗ್ರರು ಜಮ್ಮು ಕಾಶ್ಮೀರದ ಪಹಲ್ಗಾಂ ನಲ್ಲಿ ದಾಳಿ ಮಾಡಿದರು. ನಿರ್ದೋಷಿ ಅಮಾಯಕ ನಾಗರೀಕರನ್ನು ಹತ್ಯೆ ಮಾಡಿದರು. ಧರ್ಮವನ್ನು ಕೇಳಿ ಅಮಾಯಕ ರನ್ನು ಕೊಂದರು ಹೆಂಡತಿ ಮಕ್ಕಳ ಮುಂದೆ ಭೀಕರವಾಗಿ ಕೊಂದರು. ಇದು ಉಗ್ರವಾದದ ಅತ್ಯಂತ ಕ್ರೂರವಾದ ಮುಖವಾಗಿತ್ತು. ನನಗೆ ಇದು ಅತ್ಯಂತ ದುಃಖ ತಂದ ವಿಚಾರವಾಗಿತ್ತು. ಉಗ್ರವಾದದ ವಿರುದ್ಧ ದೇಶದ ಎಲ್ಲರೂ ಒಂದಾಗಿ ನಿಂತಿದ್ದೆವು. ಮಣ್ಣಲ್ಲಿ ಮಣ್ಣು ಮಾಡಲು ಸೇನೆಗೆ ಸ್ವಾತಂತ್ರ್ಯ ಕೊಟ್ಟಿದ್ವಿ.
ಸಿಂಧೂರ ಅಳಿಸಿದರೆ ಏನಾಗುತ್ತದೆ ಅಂತ ಅವರಿಗೆ ಗೊತ್ತಾಗಿದೆ. ಹೆಣ್ಣು ಮಕ್ಕಳ ಸಿಂಧೂರ್ ಅಳಿಸಿದ ಉಗ್ರರಿಗೆ ಈಗ ಗೊತ್ತಾಗಿದೆ. ಆಪರೇಷನ್ ಸಿಂಧೂರ ದೇಶದ ಹೆಣ್ಣು ಮಕ್ಕಳಿಗೆ ಸಮರ್ಪಣೆ. ಉಗ್ರವಾದಿಗಳು ಕನಸಿನಲ್ಲಿಯೂ ಊಹಿಸಿರಲಿಲ್ಲ. ಭಾರತ ಇಂತದ್ದೊಂದು ಕಠಿಣ ನಿರ್ಧಾರ ಮಾಡುತ್ತೆ ಅಂತ ಕನಸಿನಲ್ಲಿಯೂ ಊಹಿಸಿರಲಿಲ್ಲ ಇದೀಗ ಅವರಿಗೆ ಸಿಂಧೂರ ಅಳಿಸಿದರೆ ಏನಾಗುತ್ತದೆ ಎಂದು ತಿಳಿದಿದೆ ಎಂದು ಹೇಳಿದರು.
ಬಹವಾಲ್ಪುರ, ಮುರಿದ್ಕೆ ಮುಂತಾದವು ಉಗ್ರವಾದಿ ಸ್ಥಳ. ಇವು ಜಾಗತಿಕ ಉಗ್ರವಾದದ ವಿಶ್ವವಿದ್ಯಾಲಯಗಳು. 9/11 ಆಗಲಿ ಲಂಡನ್ ಟ್ಯೂಬ್ ಬಾಂಬಿಂಗ್ ಆಗಲಿ,ವಿಶ್ವದ ದೊಡ್ಡ ಉಗ್ರವಾದದ ಕೆಲಸ ಮಾಡಿದ್ದು ಇಲ್ಲಿಂದಲೇ. ಭಾರತ ಒಂದೇ ಟಿಗೆ ಇವೆಲ್ಲವನ್ನು ಕಥಮ್ ಮಾಡಿದೆm ಭಾರತದ ದಾಳಿಯಿಂದ ಪಾಕಿಸ್ತಾನ ಹತಾಶೆಗೆ ಬಿದ್ದಿದೆ. ಪಾಕಿಸ್ತಾನ ಹೆದರಿ ಹೋಗಿತ್ತು ಭಯದಲ್ಲೇ ಅದು ಸಾಹಸ ಮಾಡಿದೆ. ಉಗ್ರರ ಮಟ್ಟ ಹಾಕಲು ಸಾತ್ ಕೊಡುವ ಬದಲು ಭಾರತದ ಮೇಲೆ ದಾಳಿ ಮಾಡಿದೆ. ನಮ್ಮ ಶಾಲೆ ಕಾಲೇಜು ಮತ್ತು ಗುರುದ್ವಾರ ಟಾರ್ಗೆಟ್ ಮಾಡಿದೆ ಎಂದು ತಿಳಿಸಿದರು.