ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕಾಳಗದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಘೋಷಿಸುವಲ್ಲಿ ಯಶಸ್ವಿಯಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮಧ್ಯಸ್ಥಿಕೆ ವಹಿಸಿ ಈ ಒಂದು ಪಾಕಿಸ್ತಾನ ಮತ್ತು ಭಾರತದ ನಡುವೆ ಕದನ ವಿರಾಮ ಘೋಷಿಸಲು ಕಾರಣಿಕರ್ತರಾಗಿದ್ದಾರೆ. ಆದರೆ ಇದೀಗ ಮತ್ತೆ ಡೊನಾಲ್ಡ್ ಟ್ರಂಪ್ ಕದನ ವಿರಾಮದ ಕ್ರೆಡಿಟ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹೌದು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸುವಲ್ಲಿ ಡೊನಾಲ್ಡ್ ಟ್ರಂಪ್ ಕೂಡ ಮಹತ್ವದ ಪಾತ್ರವಹಿಸಿದ್ದರು ಎನ್ನಲಾಗುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಮತ್ತೆ ಕದನ ವಿರಾಮದ ಕ್ರೆಡಿಟ್ ತೆಗೆದುಕೊಂಡಿದ್ದಾರೆ. ಪರಮಾಣು ಸಂಘರ್ಷವನ್ನು ನಾವು ತಡೆದಿದ್ದೇವೆ. ಅಕಸ್ಮಾತ್ ಕದನ ಮುಂದುವರಿಸಿದರೆ, ವ್ಯಾಪಾರ ಬಂದ್ ಮಾಡಲಾಗುತ್ತೆ ಅಂತ ಹೇಳಿದ್ದೆ.
ಎರಡು ದೇಶಗಳ ಜೊತೆಗೆ ವ್ಯಾಪಾರ ಮಾಡಲ್ಲ ಅಂತ ಹೇಳಿದ್ದೆ. ಕರೆ ಮಾಡಿ ಹೇಳಿದ್ದಕ್ಕೆ ಇದೀಗ ಎರಡು ದೇಶಗಳು ಕದನ ವಿರಾಮ ಘೋಷಿಸಿವೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಯುದ್ಧ ತಡೆದಿದ್ದೇವೆ. ಪರಮಾಣು ಯುದ್ಧ ಏನಾದರು ಆಗಿದ್ದಾರೆ ಲಕ್ಷಾಂತರ ಜನರ ಸಾವು ಆಗುತ್ತಿತ್ತು. ನಾವು ಈ ಎಲ್ಲಾ ಅಪಾಯಕಾರಿ ಯುದ್ಧವನ್ನು ತಡೆದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.