ನವದೆಹಲಿ : ಈಗಾಗಲೇ ಭಾರತದ ಆಪರೇಷನ್ ಸಿಂಧೂರ್ ದಾಳಿಕೆ ಪಾಕಿಸ್ತಾನ ಅಕ್ಷರಶಹಃ ನಲುಗಿದೆ. ಇಷ್ಟಾದರೂ ಕೂಡ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಮತ್ತೆ ಭಾರತದ ಮೇಲೆ ದಾಳಿಗೆ ಪ್ರಯತ್ನ ಮಾಡುತ್ತಲೇ ಇದೆ. ಇತ್ತ ಭಾರತ ದಾಳಿ ಮಾಡಿದರೆ, ಅತ್ತ ಇನ್ನೊಂದು ಭಾಗದಿಂದ ಬಲೂಚ್ ಲಿಬ್ರೇಶನ್ ಆರ್ಮಿ ಪಾಕಿಸ್ತಾನದ ಸೈನಿಕರನ್ನು ಕೊಂದಿದೆ.
ಹೌದು ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿದ್ದಂತೆ ಆರ್ಮಿ ಸಹ ಪಾಕಿಸ್ತಾನದ ಹಲವು ಸೈನಿಕರನ್ನು ಹತ್ಯೆಗೈದಿದೆ. ಇದೀಗ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ (BLF) ನ ಕಮಾಂಡರ್ ಭಾರತಕ್ಕೆ ಬೇಡಿಕೆ ಇಟ್ಟಿದ್ದು ನಮಗೆ 93,000 ಗಳನ್ನು ಕೊಡಿ ನಾವು ಪಾಕಿಸ್ತಾನವನ್ನು ಕೂಡಲೇ ಮುಗಿಸುತ್ತೇವೆ. ನಮಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟರೆ ಪಾಕಿಸ್ತಾನವನ್ನು ಹುಡಿಸ್ ಮಾಡುತ್ತೇವೆ ಎಂದು ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಕಮಾಂಡರ್ ಭಾರತಕ್ಕೆ ಬೇಡಿಕೆ ಇಟ್ಟಿದ್ದಾನೆ.
ಅಲ್ಲದೆ ನಿನ್ನೆ ಬಲೂಚ್ ಲಿಬ್ರೇಶನ್ ಆರ್ಮಿ ಸಹ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಸಹ ನಿಮಗೆ ಬೆಂಬಲ ಕೊಡುತ್ತೇವೆ. ಪಾಕಿಸ್ತಾನದ ಮೇಲೆ ನೀವು ಯಾವುದೇ ದಿಟ್ಟ ಕ್ರಮ ಕೈಗೊಂಡರು ನಾವು ನಿಮಗೆ ಬೆಂಬಲ ಸೂಚಿಸುತ್ತೇವೆ ಎಂದು ಬಲೂಚ್ ಲಿಬರೇಷನ್ ಆರ್ಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಇದೀಗ BLF ಕಮಾಂಡರ್ ಭಾರತಕ್ಕೆ ಬೇಡಿಕೆ ಇಟ್ಟಿದ್ದು, 93,000 ರೈಫಲ್ ಗಳನ್ನು ಕೊಟ್ಟರೆ ಪಾಕಿಸ್ತಾನ ಮುಗಿಸುತ್ತೇವೆ ಎಂದು ಬೇಡಿಕೆ ಇಟ್ಟಿದ್ದಾರೆ.