ನವದೆಹಲಿ : ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ದಾಳಿ ಕುರಿತಂತೆ ಇಂದು ನವದೆಹಲಿಯಲ್ಲಿ ಭಾರತದ ಮೂವರು ಸೇನಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ DGMO ರಾಜೀವ್ ಘಾಯ್ ಅವರು ಆಪರೇಷನ್ ಸಿಂದಗಿ ಕುರಿತಂತೆ ಮಾಹಿತಿ ನೀಡಿದರು.
ಪಾಕಿಸ್ತಾನದ ಕಿರಾನಾ ಬೆಟ್ಟ, ಪರಮಾಣು ಕೇಂದ್ರದ ಮೇಲೆ ನಾವು ದಾಳಿ ನಡೆಸಿಲ್ಲ. ಆದರೆ ಕೇವಲ 3 ಗಂಟೆಗಳಲ್ಲಿ ಪಾಕಿಸ್ತಾನದ 11 ವಾಯುನೆಲೆಗಳನ್ನು ನಾಶಪಡಿಸಿದ್ದೇವೆ. ಪಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ. ಪಾಕಿಸ್ತಾನದ ಡ್ರೋನ್ ಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದ್ದೇವೆ. ಪಾಕಿಸ್ತಾನದ ಚೀನಾ ನಿರ್ಮಿತ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದೇವೆ.
ಜಮ್ಮು ಕಾಶ್ಮೀರದ ಪಹಲ್ಗಾಂ ದಾಳಿಗೆ ಪ್ರತಿಕಾರ ತೀರಿಸಿದ್ದೇವೆ. ನೌಕಾ ಸೇನೆ ಎಲ್ಲದಕ್ಕೂ ಸರ್ವಸನದ್ಧವಾಗಿದೆ.ಶತ್ರುಗಳ ಜೆಟ್ ಗಳನ್ನು ಹತ್ತಿರ ಸುಳಿಯಲು ಸಹ ಬಿಡಲ್ಲ. 29 ಮೆಗ್ ಜೆಟ್ ಗಳು ಸನ್ನದ್ಧವಾಗಿವೆ. ಪಾಕಿಸ್ತಾನ ದಾಳಿ ಮಾಡಿದರೆ ನಾವು ಪ್ರತಿದಾಳಿ ಮಾಡುತ್ತೇವೆ. ಭಾರತೀಯ ಸೇನೆಯ ಎಲ್ಲಾ ಶಸ್ತ್ರಗಳು ಸನ್ನದ್ಧವಾಗಿವೆ. ಮಿಲಿಟರಿ ಸೇನೆ ಅಲರ್ಟ್ ಆಗಿದ್ದು ಪಾಕಿಸ್ತಾನ ಕೆಣಕಿದರೆ ನಾವು ಸುಮ್ಮನೆ ಇರಲ್ಲ ಎಂದು ತಿಳಿಸಿದರು.