ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಇಂದು ಡಬಲ್ ಮರ್ಡರ್ ನಡೆದಿದ್ದು, ಆಸ್ತಿಯ ವಿಚಾರವಾಗಿ ತಾಯಿ ಮಗನನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ಆಸ್ತಿ ವಿವಾದ ಕೊಡಲಿಯಿಂದ ಕೊಚ್ಚಿ, ತಾಯಿ ಮಗನ ಬರ್ಬರ ಹತ್ಯೆಯಾಗಿದೆ. ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಈ ಒಂದು ಭೀಕರವಾದ ಹತ್ಯೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ತಾಯಿ ಸಂಗಮ್ಮ ಗೋನಾಳ (45) ಹಾಗೂ ಮಗ ಸೋಮಪ್ಪ (26) ಕೊಲೆಯಾದ ದುರ್ದೈವಿಗಳು ಎಂದು ತಿಳಿದುಬಂದಿದೆ.
ಆಸ್ತಿಯ ವಿಚಾರವಾಗಿ, ಸಣ್ಣ ಸೋಮಪ್ಪ ಗೋನಾಳ ಎಂಬ ವ್ಯಕ್ತಿ ಕೊಡಲಿಯಿಂದ ಕೊಚ್ಚಿ ತಾಯಿ, ಮಗನನ್ನು ಭೀಕರವಾಗಿ ಕೊಲೆಗೈದಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಇಳಕಲ್ ಗ್ರಾಮಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.