ನವದೆಹಲಿ : ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ದಾಳಿ ಮಾಡಿದ್ದು ಈ ಒಂದು ದಾಳಿಯ ಕುರಿತಂತೆ ಇದೀಗ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಉನ್ನತ ಕಮಾಂಡರ್‌ಗಳು ಆಪರೇಷನ್ ಸಿಂಧೂರ್ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಆಪರೇಷನ್ ಸಿಂಧೂರ್ ಕುರಿತಂತೆ ಮಾಹಿತಿ ನೀಡಿದರು.
ನಮ್ಮ ಟಾರ್ಗೆಟ್ ಪಾಕಿಸ್ತಾನದ ಯೋಧರು ಆಗಿರಲಿಲ್ಲ. ನಮ್ಮ ಟಾರ್ಗೆಟ್ ಉಗ್ರರ ನೆಲೆ ದ್ವಂಸ ಮಾಡೋದು ಆಗಿತ್ತು ಎಲ್ ಒಸಿ ಬಳಿ 35 ರಿಂದ 40 ಯೋಧರನ್ನು ಕೊಂದಿದ್ದೇವೆ. ನಾವು ಬಳಸಿದ ಶತ್ರುಗಳ ಬಗ್ಗೆ ತಿಳಿಸುವುದಿಲ್ಲ. ಪಾಕಿಸ್ತಾನದ ಡಿಜಿಎಂ ಅವರ ಜೊತೆ ನಿನ್ನೆ ಮಾತುಕತೆ ಆಗಿದೆ. ನಮಗೆ ಕರೆ ಮಾಡಿ ಮಾತುಕತೆ ನಡೆಸಲು ತಿಳಿಸಿದ್ದರು.
ಅವರು ಪ್ರಸ್ತಾಪಿಸಿದ ನಂತರವೇ ನಾವು ಕದನ ವಿರಾಮ ಗೋಪಿಸಿದ್ದೇವೆ ಪಾಕಿಸ್ತಾನದ ಡಿಜಿಎಂ ಕದನ ವಿರಾಮವನ್ನು ಪ್ರಸ್ತಾಪಿಸಿದ್ದರು ಮೇಹತ್ತರಂದು ಕರೆ ಮಾಡಿ ಕದನ ವಿರಾಮಗೊಳಿಸಿ ಎಂದು ಮನವಿ ಮಾಡಿದ್ದರು ಹಾಗಾಗಿ ನೆನ್ನೆ ಕದನ ವಿರಾಮ ಘೋಷಿಸಿದ್ದೆವು. ಆಪರೇಷನ್ ಸಿಂಧೂರ್ ನಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.
ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಹಾಗು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಉಪಸ್ಥಿತರಿದ್ದರು.