ನವದೆಹಲಿ : ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ದಾಳಿ ಮಾಡಿದ್ದು ಈ ಒಂದು ದಾಳಿಯ ಕುರಿತಂತೆ ಇದೀಗ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಉನ್ನತ ಕಮಾಂಡರ್‌ಗಳು ಆಪರೇಷನ್ ಸಿಂಧೂರ್ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಮಾತನಾಡಿ, ಆಪರೇಷನ್ ಸಿಂಧೂರ್ ದಾಳಿಯಲ್ಲಿ 35 ರಿಂದ 40 ಪಾಕಿಸ್ತಾನಿ ಸೈನಿಕರನ್ನು ಕೊಂದಿದ್ದೇವೆ ಎಂದು ಮಾಹಿತಿ ನೀಡಿದರು.
ಆಪರೇಷನ್ ಸಿಂಧೂರ್ ಕುರಿತಂತೆ ಮಾತನಾಡಿದ ಅವರು, ಭಾರತದ ಸೇನಾ ನೆಲೆಯನ್ನು ಗುರಿಯಾಗಿಸಿ ಪಾಕಿಸ್ತಾನ 700 ಡ್ರೋನ್ ಗಳಿಂದ ದಾಳಿ ಮಾಡಿತ್ತು. ಗಡಿಯುದ್ದಕ್ಕೂ ಪಾಕಿಸ್ತಾನ ನಿರಂತರವಾಗಿ ದಾಳಿ ನಡೆಸಿದ್ದು, ಡ್ರೋನ್ ದಾಳಿಯ ವೇಳೆ ಪಾಕಿಸ್ತಾನದಲ್ಲಿ ನಾಗರೀಕರ ವಿಮಾನ ಹಾರಾಟ ನಡೆಸುತ್ತಿತ್ತು. ಭಾರತ ಪ್ರತಿ ದಾಳಿ ನಡೆಸಿದಾಗಳಲೂ ಪಾಕಿಸ್ತಾನ ನಾಗರೀಕರ ವಿಮಾನ ಹಾರಾಟ ನಡೆಸಿದೆ. ಆದರೆ ಪಾಕಿಸ್ತಾನದ ನಾಗರಿಕ ವಿಮಾನಕ್ಕೆ ಒಂದು ಹಾನಿಯೂ ಆಗಿಲ್ಲ ಎಂದು ತಿಳಿಸಿದರು.
ಫೈಟರ್ ಜೆಟ್ ಮತ್ತು ಡೌನ್ ಗಳಿಂದ ಪಾಕಿಸ್ತಾನ ದಾಳಿಗೆಗೆ ಯತ್ನಿಸುತ್ತಿತ್ತು ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ್ದೇವೆ. ವಾಯು ಮಾರ್ಗದಲ್ಲಿ ಪಾಕಿಸ್ತಾನ ಪದೇ ಪದೇ ಭಾರತದ ಮೇಲೆ ದಾಳಿ ಮಾಡುತ್ತಿತ್ತು ಮೇ 8 ಮತ್ತು 9ರಂದು 35 ರಿಂದ 40 ಆರ್ಟಿಲರಿ ದಾಳಿ ಮಾಡಿದೆ ಅಲ್ಲದೆ ಪಾಕಿಸ್ತಾನದ 35 ರಿಂದ 40 ಸೈನಿಕರನ್ನು ನಾವು ಕೊಂದಿದ್ದೇವೆ. ಇದೇ ವೇಳೆ ಭಾರತಕ್ಕೆ ಬೇಕಾಗಿದ್ದ ಇವರು ಮೋಸ್ಟ್ ವಾಂಟೆಡ್ ಉಗ್ರರನ್ನು ಆಪರೇಷನ್ ಸಿಂಧೂರ್ ದಾಳಿಯಲ್ಲಿ ಹತ್ಯೆಗೈದಿದ್ದೇವೆ ಎಂದು ಅವಧೀಶ್ ಕುಮಾರ್ ಭಾರ್ತಿ ಮಾಹಿತಿ ನೀಡಿದರು.
ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಹಾಗು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಉಪಸ್ಥಿತರಿದ್ದರು.