ನವದೆಹಲಿ : ಭಾರತದ ಜೊತೆಗೂಡಿ ಪಾಕಿಸ್ತಾನದ ವಿರುದ್ಧ ಹೋರಾಟ ಮಾಡಲು ಬಲೂಚಿಸ್ತಾನ ಭಾರತಕ್ಕೆ ಬೆಂಬಲ ಘೋಷಿಸಿದೆ. ಭಾರತಕ್ಕೆ ಬಲೂಚ್ ಲಿಬರೇಷನ್ ಆರ್ಮಿ (BLA) ಇದೀಗ ಬೆಂಬಲ ಸೂಚಿಸಿದ್ದು, ಭಾರತದೊಂದಿಗೆ ಪಾಕಿಸ್ತಾನದ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದೆ. ಈ ಕುರಿತು ಬಲೂಜ್ ಲಿಬರೇಷನ್ ಆರ್ಮಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ
ಪಾಕಿಸ್ತಾನ ವಿರುದ್ಧ ಭಾರತ ನಿರ್ಣಾಯಕ ಕ್ರಮ ಕೈಗೊಂಡರೆ ಅದಕ್ಕೆ ಬೆಂಬಲ ನೀಡುತ್ತೇವೆ. ಭಾರತದ ಜೊತೆ ಪಶ್ಚಿಮ ಗಡಿಯಲ್ಲಿ ಪಾಕಿಸ್ತಾನದ ವಿರುದ್ಧ ದಾಳಿ ನಡೆಸುತ್ತೇವೆ ಎಂದು ಪ್ರಕಟಣೆಯ ಮೂಲಕ ಬಲೂಚ್ ಆರ್ಮಿ ಬೆಂಬಲ ನೀಡಿದೆ. ಪಾಕ್ ವಿರುದ್ಧ ನಿರ್ಣಾಯಕ ಕ್ರಮ ಕೈಗೊಂಡರೆ ಸ್ವಾಗತಿಸುವುದು ಅಲ್ಲದೆ ಮಿಲಿಟರಿ ಶಕ್ತಿಯಾಗಿ ಅದರೊಂದಿಗೆ ನಿಲ್ಲುತ್ತೇವೆ.
ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಬಲೂಚಿಸ್ತಾನ ಲಿಬರೇಷನ್ ಆರ್ಮಿ ಕರೆದಿದೆ.
ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಭರವಸೆಗಳನ್ನು ನಂಬುವ ಸಮಯ ಮುಗಿದಿದೆ. ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರವೆಂದು ಪರಿಗಣಿಸಿ. ಪಾಕಿಸ್ತಾನದ ವಿರುದ್ಧ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇದೀಗ ಬಲೂಚ್ ಲಿಬರೇಷನ್ ಆರ್ಮಿ ಒತ್ತಾಯಿಸಿದೆ. ಭಾರತ ಸೇರಿದಂತೆ ಇಡೀ ಜಗತ್ತಿಗೆ ಬಿಎಲ್ಎ ಒತ್ತಾಯಿಸುವ ಮೂಲಕ ಭಾರತ ಬೆಂಬಲಿಸಿ ಬಲೂಚ್ ಲಿಬರೇಷನ್ ಆರ್ಮಿ ಇದೀಗ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.