ಬೆಂಗಳೂರು : ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದ್ದು ಈಗಾಗಲೇ ಭಾರತ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ಮೂಲಕ ತಿರುಗೇಟು ನೀಡಿದೆ. ಅಲ್ಲದೆ ಈಗಾಗಲೇ ನೂರಕ್ಕೂ ಹೆಚ್ಚು ಉಗ್ರರು ಸಾವನಪ್ಪಿದ್ದು ಭಾರತಕ್ಕೆ ಬೇಕಾಗಿದ್ದ ಐವರು ಮೋಸ್ಟ್ ವಾಂಟೆಡ್ ಉಗ್ರರನ್ನು ಸಹ ಆಪರೇಷನ್ ಸಿಂಧೂರ ದಾಳಿಯಲ್ಲಿ ಭಾರತೀಯ ಸೇನೆ ಹತ್ಯೆಗೈದಿದೆ. ಇನ್ನು ಆಪರೇಷನ್ ಸಿಂಧೂರ ಬಗ್ಗೆ ಸ್ಯಾಂಡಲ್ವುಡ್ ಬಾದ್ ಶಾ ಕಿಚ್ಚ ಸುದೀಪ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಆಪರೇಷನ್ ಸಿಂಧೂರ ವಿಚಾರವಾಗಿ, ಕಿಚ್ಚ ಸುದೀಪ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಒಬ್ಬ ಹೆಮ್ಮೆಯ ಭಾರತೀಯನ್ನಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ ನಿಮ್ಮ ಮಾತುಗಳು ನನಗೆ ಯಾವಾಗಲೂ ಶಕ್ತಿ. ಭಾರತವು ಯಾವಾಗಲೂ ಎದ್ದೇಳುತ್ತದೆ ಎಂಬ ಧೈರ್ಯಶಾಲಿ ಮತ್ತು ನಿರ್ಣಾಯಕ ಸಂದೇಶವನ್ನು ವಿಶ್ವಕ್ಕೆ ತಿಳಿಸಿದೆ. ಸಂಪೂರ್ಣ ಕನ್ನಡ ಚಿತ್ರರಂಗವು ನಿಮ್ಮೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಬರೆದಿದ್ದಾರೆ.
ನಿಮ್ಮ ನಾಯಕತ್ವದಲ್ಲಿ ರಕ್ಷಣಾ ಪಡೆಗಳು ಶಿಸ್ತು ಶೌರ್ಯ ಪ್ರದರ್ಶಿಸಿವೆ. ನಾವು ಒಂದೇ ಜನ, ಒಂದೇ ಧ್ವನಿ, ಒಂದೇ ರಾಷ್ಟ್ರವಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ. ಎಂದು ಪ್ರಧಾನ ಮಂತ್ರಿ ಮೋದಿಗೆ ಸುಧೀರ್ಘ ಪತ್ರ ಬರೆದಿದ್ದಾರೆ. ಸುದೀಪ್ ಅವರ ತಾಯಿ ಸರೋಜಾ ನಿಧನರಾದಾಗ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು. ನಟ ಸುದೀಪ್ ಗೆ ಪತ್ರ ಬರೆದು ಪ್ರಧಾನಮಂತ್ರಿ ಮೋದಿ ಸಂತಾಪ ಸೂಚಿಸಿದ್ದರು. ಪತ್ರದಲ್ಲಿ ಮೋದಿಯವರು ತಿಳಿಸಿದ ಸಂತಾಪವನ್ನು ಕಿಚ್ಚ ಸುದೀಪ್ ಇದೆ ವೇಳೆ ಸ್ಮರಿಸಿದ್ದಾರೆ.