ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಈಗಾಗಲೇ ದೇಶದೆಲ್ಲೆಡೆ ಮಾಕ್ ಡ್ರಿಲ್ ಮೂಲಕ ಜನರಲ್ಲಿ ಜಾಗೃತೆ ಮೂಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಈ ನಾಲ್ಕು ರಾಜ್ಯಗಳ ಒಟ್ಟು 32 ವಿಮಾನ ನಿಲ್ದಾಣಗಳನ್ನು ಮೇ 14ರ ವರೆಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ.
ಹೌದು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ಹಾಗಾಗಿ ದೇಶದ ಜನರ ಸುರಕ್ಷತೆಯ ಹಿನ್ನೆಲೆಯಲ್ಲಿ, ಮೇ 14ರವರೆಗೆ ಭಾರತದ 32 ಏರ್ಪೋರ್ಟ್ ಗಳು ಬಂದ್ ಆಗಿರಲಿದೆ. ಈ ಬಗ್ಗೆ ಕೇಂದ್ರ ನಾಗರೀಕ ವಿಮಾನಯಾನ ಸಚಿವಾಲಯದಿಂದ ಈ ಕುರಿತು ಆದೇಶ ಹೊರಡಿಸಲಾಗಿದ್ದು, ಜಮ್ಮು ಕಾಶ್ಮೀರ, ಪಂಜಾಬ್ ರಾಜಸ್ಥಾನ ಹಾಗೂ ಗುಜರಾತ್ ಈ 4 ರಾಜ್ಯಗಳಲ್ಲಿನ ಒಟ್ಟು 32 ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಬಂದ್ ಆಗಲಿವೆ.