ರಾಜಸ್ಥಾನ್ : ಭಾರತ ಮತ್ತು ಪಾಕಿಸ್ತಾನದ ನಡುವೆ ಇದೀಗ ಕ್ಷಿಪಣಿ ದಾಳಿ ಮುಂದುವರೆದಿದ್ದು, ಕಳೆದ ಕೆಲವು ದಿನಗಳಿಂದ ಗಡಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಬಳಿಕ ಭಾರತದ ಮೇಲೆ ದಾಳಿ ಮಾಡಿದ ಪಾಕಿಸ್ತಾನದ ಎಲ್ಲಾ ಡ್ರೋನ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಇದೀಗ ಪಾಕಿಸ್ತಾನ ತನ್ನ ಬಳಿ ಇರುವ ಅತ್ಯಾಧುನಿಕ ಮಿಸೈಲ್ ಅನ್ನು ಭಾರತದ ಮೇಲೆ ದಾಳಿ ಮಾಡಿದೆ. ಆದರೆ ಭಾರತೀಯ ಸೇನೆ ಅದನ್ನು ಸಹ ನಾಶ ಮಾಡಿದೆ.
ಹೌದು ಅತ್ಯಾಧುನಿಕ ಅಬ್ದಾಲಿ ಮಿಸೈಲ್ ಅನ್ನು ಪಾಕಿಸ್ತಾನ ಇದೀಗ ಭಾರತದ ಮೇಲೆ ದಾಳಿ ಮಾಡಿದೆ. ತನ್ನ ಬಳಿ ಇರುವ ಅತ್ಯಾಧುನಿಕ ಮಿಸೈಲ್ ಅನ್ನು ಬಳಸಿ ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡಿದೆ.ಆದರೆ ಅಬ್ದಾಲಿ ಮಿಸೈಲ್ ಅನ್ನು ಭಾರತೀಯ ಸೇನೆ ಉಡೀಸ್ ಮಾಡಿದೆ. ಸೇನಾ ನೆಲೆ ಲಾಜೆಸ್ಟಿಕ್ ಹಬ್ ಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ಇದೀಗ ದಾಳಿ ಮಾಡಿದೆ. ರಾಜಸ್ಥಾನದ ಜೈಸಲ್ಮೆರ್ ನಲ್ಲಿ ಪಾಕಿಸ್ತಾನದ ಅಬ್ದಾಲಿ ಕ್ಷಿಪಣಿ ಇದೀಗ ಪುಡಿಪುಡಿ ಆಗಿದೆ.
‘ಅಬ್ದಾಲಿ ಮಿಸೈಲ್’
ಈ ಮಿಸೈಲ್ ಸುಮಾರು 450 km ಗೂ ದೂರ ಸಾಗಿ ದಾಳಿ ಮಾಡುವ ಶಕ್ತಿ ಇದಕ್ಕಿದೆ. ನ್ಯೂಕ್ಲಿಯರ್ ಅಸ್ತ್ರ ಸಾಗಿಸಬಲ್ಲ ಶಕ್ತಿಯನ್ನು ಅಬ್ದಾಲಿ ಮಿಸೈಲ್ ಹೊಂದಿದೆ. ನಿಖರ ಗುರಿ ತಲುಪಿ ದಾಳಿ ಮಾಡಬಲ್ಲಂತಹ ಶಕ್ತಿ ಇದಕ್ಕಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊತ್ತು ಈ ಒಂದು ಅಬ್ದಾಲಿ ಕ್ಷಿಪಣಿ ಸಾಗಬಲ್ಲದು. ಸೇನಾ ನೆಲೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡುವ ಶಕ್ತಿ ಇದಕ್ಕಿದೆ. ಆದರೆ ಭಾರತೀಯ ಸೇನೆ ಇದೀಗ ಇದನ್ನು ಪುಡಿ ಪುಡಿ ಮಾಡಿದೆ.