ನವದೆಹಲಿ: ಪಾಕಿಸ್ತಾನದ ಮೇಲೆ ಭಾರತೀಯ ಸೇನೆಯ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಹೆಸರಿಡಲಾಗಿದೆ. ಈ ಟೈಟಲ್ ಗೆ ರಿಲಯನ್ಸ್ ಟ್ರೇಡ್ ಮಾರ್ಕ್ ಬಿಡ್ ಮಾಡೋದಕ್ಕೆ ಮುಂದಾಗಿ ಹಿಂದೆ ಸರಿದಿತ್ತು. ಈ ಬೆನ್ನಲ್ಲೇ ಬಾಲಿವುಡ್ ನಿರ್ಮಾಪಕರು ಆಪರೇಷನ್ ಸಿಂಧೂರ್ ಟೈಟಲ್ ಗಾಗಿ ಮುಗಿಬಿದ್ದಿರುವುದಾಗಿ ತಿಳಿದು ಬಂದಿದೆ.
ಹೌದು ಭಾರತೀಯ ಸೇನಾ ಕಾರ್ಯಾಚರಣೆಯ ಆಪರೇಷನ್ ಸಿಂಧೂರ್ ಟೈಟಲ್ ಗೆ ಭಾರೀ ಬೇಡಿಕೆ ಇಂಟಾಗಿದೆ. ಬಾಲಿವುಡ್ ತಾರೆಯರು ಇದನ್ನು ಮೆಚ್ಚಿಕೊಂಡಿದ್ದರೇ, ನಿರ್ಮಾಪಕರು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಸಿನಿಮಾ ಮಾಡೋದಕ್ಕೆ ಟೈಟಲ್ ಗೆ ನಾಮುಂದು, ತಾಮುಂದು ಅಂತ ನೋಂದಣಿಗೆ ಮುಗಿಬಿದ್ದಿದ್ದಾರೆ ಎನ್ನಲಾಗಿದೆ.
ಅಂದಹಾಗೇ ಈಗಾಗಲೇ ಉರಿ, ಬಾರ್ಡರ್ ಸೇರಿದಂತೆ ಭಾರತೀಯ ಸೇನೆಗೆ ಸಂಬಂಧಿಸಿದಂತ ಹಲವು ಬಾಲಿವುಡ್ ಸಿನಿಮಾಗಳು ತೆರೆ ಕಂಡಿದ್ದಾವೆ. ಇದೀಗ ಅದೇ ರೀತಿಯ ನೈಜ ಕತೆಯ ಆಪರೇಷನ್ ಸಿಂಧೂರದ ಕುರಿತಂತೆ ಸಿನಿಮಾ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಇದಕ್ಕಾಗಿ 15ಕ್ಕೂ ಹೆಚ್ಚು ಖ್ಯಾತ ನಿರ್ಮಾಣ ಸಂಸ್ಥೆಗಳು ಟೈಟಲ್ ರಿಜಿಸ್ಟರ್ ಮಾಡಲು ಮುಂದಾಗಿದ್ದಾವೆ.
BREAKING: ಭಾರತೀಯ ಸೇನಾ ಕಾರ್ಯಾಚರಣೆ ನೇರ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸೂಚನೆ
BREAKING: ಭಾರತ-ಪಾಕ್ ಉದ್ವಿಗ್ನತೆ: ಮೇ.10ರವರೆಗೆ ಹಲವು ನಗರಗಳಿಗೆ ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ