ಇಸ್ಲಾಮಾಬಾದ್ : ಪಾಕಿಸ್ತಾನದ ದಾಳಿಗೆ ಭಾರತ ಪ್ರತಿಕಾರವಾಗಿ ಪ್ರತಿದಾಳಿ ಮಾಡಿದೆ. ಇದರಿಂದ ಪಾಕಿಸ್ತಾನ ತತ್ತರಿಸಿ ಹೋಗಿದೆ. ಇದರ ನಡುವೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್(PSL) ನ ಉಳಿದ ಕ್ರಿಕೆಟ್ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್(UAE) ಗೆ ಸ್ಥಳಾಂತರಿಸಲಾಗಿದೆ.ಮೇ 8 ರಂದು ರಾವಲ್ಪಿಂಡಿ ಕ್ರೀಡಾಂಗಣವು ಡ್ರೋನ್ ದಾಳಿಯಿಂದ ಹಾನಿಗೊಳಗಾದ ಹಿನ್ನೆಲೆ ಪಿಎಸ್ಎಲ್ ಪಂದ್ಯಗಳು ದುಬೈಗೆ ಶಿಫ್ಟ್ ಆಗಿವೆ.
ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಿಗದಿಯಾಗಿದ್ದ ಪೇಶಾವರ್ ಝಲ್ಮಿ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯವನ್ನು ಭಾರತೀಯ ಸಶಸ್ತ್ರ ಪಡೆಗಳು ರಾವಲ್ಪಿಂಡಿ ಸೇರಿದಂತೆ ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳ ಮೇಲೆ ದಾಳಿ ಮಾಡಿದ ನಂತರ ರದ್ದುಗೊಳಿಸಲಾಯಿತು.
PSL ನ ಉಳಿದ ಎಲ್ಲಾ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸುತ್ತಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧಿಕಾರಿಗಳು ದೃಢಪಡಿಸಿದ್ದಾರೆ. ಭಾರತದ ದಾಳಿ ಮತ್ತು ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ PSL ಯೋಜಿಸಿದಂತೆ ಮುಂದುವರಿಯುತ್ತದೆ ಎಂದು PCB ಹೇಳಿದೆ.
HBL PSL X remaining matches shifted to UAE
Read more: https://t.co/Fs5LiZ7oof#HBLPSLX
— PCB Media (@TheRealPCBMedia) May 8, 2025