ಜಮ್ಮು ಕಾಶ್ಮೀರ : ತಡರಾತ್ರಿ ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ಶೆಲ್ ದಾಳಿ ನಡೆಸಿತ್ತು. ಈ ಒಂದು ದಾಳಿಯಲ್ಲಿ ಭಾರತದ ಮೂಲದ ಮಹಿಳೆಯೋರ್ವರು ಸಾವನಪ್ಪಿದ್ದರು. ಹಾಗೂ ಹಲವರಿಗೆ ಗಂಭೀರವಾದ ಗಾಯಗಳಾಗಿದ್ದು, ಇದೀಗ ಕೆಲವು ಗಂಟೆಗಳ ನಂತರ ಪಾಕಿಸ್ತಾನ ಮತ್ತೆ ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಶೆಲ್ ದಾಳಿ ಮುಂದುವರೆಸಿದೆ
ಹೌದು ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ್ ಮತ್ತೆ ಶೆಲ್ ದಾಳಿ ಆರಂಭಿಸಿದೆ. ಪಾಕಿಸ್ತಾನದಿಂದ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಕೆಲವು ಗಂಟೆಗಳ ಅಂತರದಲ್ಲಿ ಮತ್ತೆ ಆರಂಭಿಸಿದೆ. ಜಮ್ಮು ಕಾಶ್ಮೀರದ ಏರ್ಪೋರ್ಟ್ ಗುರಿಯಾಗಿಸಿಕೊಂಡು ಇದೀಗ ದಾಳಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ.