ಇಸ್ಲಾಮಾಬಾದ್ : ಭಾರತ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಸಹ ನಾವು ಭಾರತದ ಹಲವು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿತ್ತು. ಇದೇ ವಿಚಾರವಾಗಿ ಇದೀಗ ಪಾಕಿಸ್ತಾನ ಪ್ರಜೆ ಭಾರತದ ದಾಳಿಯನ್ನು ಶ್ಲಾಘನೆ ಮಾಡಿದ್ದು, ತಮ್ಮ ದೇಶದ ಸುಳ್ಳುಗಳನ್ನು ಬಯಲಿಗೆಳೆದು, ಭಾರತದ ನಿಖರ ದಾಳಿಗಳನ್ನು ಶ್ಲಾಘಿಸಿದ್ದಾನೆ.
ವೈರಲ್ ಆಗಿರುವ ವಿಡಿಯೊದಲ್ಲಿ ಈ ಪಾಕಿಸ್ತಾನದ ವ್ಯಕ್ತಿ ಭಾರತವು 24 ಕ್ಷಿಪಣಿಗಳನ್ನು ಉಡಾಯಿಸಿದ್ದು, ಪಾಕಿಸ್ತಾನವು ಒಂದೇ ಒಂದು ಕ್ಷಿಪಣಿಯನ್ನು ತಡೆಯಲು ವಿಫಲವಾಯಿತು ಎಂದು ಹೇಳಿದ್ದಾನೆ . ಪಾಕಿಸ್ತಾನದ ಮಾಧ್ಯಮಗಳು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹರಡಿದ್ದ ಮಾಹಿತಿಯನ್ನು ಸುಳ್ಳು ಎಂದು ಈ ವ್ಯಕ್ತಿ ಹೇಳಿದ್ದಾನೆ. ಅವೆಲ್ಲವೂ ತಪ್ಪು ವರದಿಗಳು ಎಂದು ಪಾಕಿಸ್ತಾನದ ವ್ಯಕ್ತಿಯೇ ಖಂಡಿಸಿದ್ದಾನೆ.
ಭಾರತ ತನ್ನ ಎಲ್ಲ ಗುರಿಗಳನ್ನು ಯಶಸ್ವಿಯಾಗಿ ಹೊಡೆದಿದೆ. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಒಂದು ಕ್ಷಿಪಣಿಯನ್ನೂ ತಡೆಯಲಿಲ್ಲ. ಭಾರತ ನಮ್ಮ ಮನೆಯೊಳಕ್ಕೆ ಒಳನುಗ್ಗಿ ದಾಳಿ ಮಾಡಿತು, ಇದು ಸತ್ಯ. ಇರಾನ್ 200-400 ಕ್ಷಿಪಣಿಗಳನ್ನು ಉಡಾಯಿಸಿದಾಗ ಇಸ್ರೇಲ್ ಅವುಗಳನ್ನು ತಡೆಯುತ್ತದೆ. ಆದರೆ ಭಾರತ 24 ಕ್ಷಿಪಣಿಗಳನ್ನು ಉಡಾಯಿಸಿತು, ನಾವು ಒಂದನ್ನೂ ತಡೆಯಲಾಗಲಿಲ್ಲ ಎಂದಿದ್ದಾನೆ.
Listen to this Pakistani national explain how #OperationSindoor precisely struck over two dozen high-value terror targets, without hitting any military or civilian areas. He also debunks Pakistan’s false claims about bringing down Indian fighter jets. Deep down, Pakistanis know… pic.twitter.com/1qdOk1AVLs
— Amit Malviya (@amitmalviya) May 8, 2025