ಮೇ 9-14 ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮುಂದೂಡಿದೆ.
ಚಾರ್ಟರ್ಡ್ ಅಕೌಂಟೆಂಟ್ಸ್ ಫೈನಲ್, ಇಂಟರ್ಮೀಡಿಯೆಟ್ ಮತ್ತು ಪೋಸ್ಟ್ ಕ್ವಾಲಿಫಿಕೇಷನ್ ಕೋರ್ಸ್ ಪರೀಕ್ಷೆಗಳ (ಇಂಟರ್ನ್ಯಾಷನಲ್ ಟ್ಯಾಕ್ಸೇಷನ್ – ಅಸೆಸ್ಮೆಂಟ್ ಟೆಸ್ಟ್ (ಐಎನ್ಟಿಟಿ ಎಟಿ ಮೇ 2025)] ಉಳಿದ ಪರೀಕ್ಷೆಗಳನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ ಎಂದು ಐಸಿಎಐ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಧಿಕೃತ ಐಸಿಎಐ ಹೇಳಿಕೆಯಲ್ಲಿ, “ಸಂಸ್ಥೆಯ ಪ್ರಮುಖ ಪ್ರಕಟಣೆ ಸಂಖ್ಯೆ 13-ಸಿಎ (ಪರೀಕ್ಷೆ) / 2025 ದಿನಾಂಕ 13 ಜನವರಿ 2025 ರ ಭಾಗಶಃ ಮಾರ್ಪಾಡುಗಳಲ್ಲಿ, ದೇಶದಲ್ಲಿನ ಉದ್ವಿಗ್ನತೆ ಮತ್ತು ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಚಾರ್ಟರ್ಡ್ ಅಕೌಂಟೆಂಟ್ಸ್ ಫೈನಲ್, ಇಂಟರ್ಮೀಡಿಯೆಟ್ ಮತ್ತು ಪೋಸ್ಟ್ ಕ್ವಾಲಿಫಿಕೇಷನ್ ಕೋರ್ಸ್ ಪರೀಕ್ಷೆಗಳ ಉಳಿದ ಪತ್ರಿಕೆಗಳನ್ನು ಮುಂದೂಡಲಾಗಿದೆ” ಎಂದಿದೆ.