ಶ್ರೀನಗರ: ಜಮ್ಮು ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅನೇಕ ಪಾಕಿಸ್ತಾನಿ ಶಸ್ತ್ರಾಸ್ತ್ರಗಳು ದಾಳಿ ನಡೆಸಿದ ನಂತರ ಗುರುವಾರ ತಡರಾತ್ರಿ ಜಮ್ಮುವಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಪಾಕಿಸ್ತಾನ ನಡೆಸಿದಂತ ಡ್ರೋನ್, ಕ್ಷಿಪಣಿ ದಾಳಿಯನ್ನು ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಅಷ್ಟೇ ಯಶಸ್ವಿಯಾಗಿ ತಟಸ್ಥಗೊಳಿಸಲಾಗಿದೆ.
ಹೌದು ಭಾರತದ ಎಸ್ -400 ವಾಯು ರಕ್ಷಣಾ ವ್ಯವಸ್ಥೆಯನ್ನು ತ್ವರಿತವಾಗಿ ಸಕ್ರಿಯಗೊಳಿಸಲಾಯಿತು. ಎಲ್ಲಾ ಕ್ಷಿಪಣಿಗಳು ತಮ್ಮ ಗುರಿಗಳನ್ನು ಹೊಡೆಯುವ ಮೊದಲು ತಡೆದು, ಧ್ವಂಸಗೊಳಿಸಿದೆ.
#BREAKING: Jammu at present is under attack. Drones across the night sky. Blackout has happened across the city. Indian forces neutralising the threat. pic.twitter.com/lvUxq5Opgv
— Aditya Raj Kaul (@AdityaRajKaul) May 8, 2025
ಪಾಕಿಸ್ತಾನದ ಡ್ರೋನ್ ದಾಳಿಯ ಕಾರಣ ಜಮ್ಮುವಿನಲ್ಲಿ ನಗರದಾದ್ಯಂತ ವಿದ್ಯುತ್ ಕಡಿತಕ್ಕೆ ಕಾರಣವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಹೆಚ್ಚಿನ ಭಾಗಗಳಲ್ಲಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಯಿತು.
More visuals of attack on Jammu by Pakistani drones pic.twitter.com/L9CKWB827Y
— Sidhant Sibal (@sidhant) May 8, 2025