ಬೆಂಗಳೂರು : ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರರ ಗುಂಡಿನ ದಾಳಿಗೆ 26 ಅಮಾಯಕರು ಬಲಿಯಾಗಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಭಾರತ ಕೂಡ ನಿನ್ನೆ ಪಾಕಿಸ್ತಾನದ ಉಗ್ರರ ಕ್ಯಾಂಪ್ ಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಇಂದು ಕ್ಷಿಪಣಿ ದಾಳಿಯಲ್ಲಿ ಆತ್ಮಾಹುತಿ ಡ್ರೋನ್ ಗಳನ್ನು ಬಳಕೆ ಮಾಡಲಾಗಿದೆ.
ವಿಶೇಷ ಏನು ಅಂದರೆ ಆಪರೇಷನ್ ಸಿಂಧೂರಿಗೆ ಬೆಂಗಳೂರಿನ ಆತ್ಮಾಹುತಿ ಡ್ರೋನ್ ಬಳಕೆ ಮಾಡಲಾಗಿದೆ. ಹೌದು ಬೆಂಗಳೂರಿನಲ್ಲಿ ತಯಾರಾದ ಆತ್ಮಾಹುತಿ ಡ್ರೋನ್ ಗಳನ್ನು ಪಾಕಿಸ್ತಾನದ ಮೇಲೆ ದಾಳಿ ನಡೆಸುವ ‘ಆಪರೇಷನ್ ಸಿಂಧೂರ್’ ಗೆ ಬಳಸಲಾಗಿದೆ. ಆಲ್ಫಾ ಡಿಸೈನ್ ಮತ್ತು ಇಸ್ರೇಲ್ ನ ಎಲ್ಬಿಟ್ ಸೆಕ್ಯೂರಿಟಿ ಸಿಸ್ಟಮ್ ಈ ಎರಡು ಸಂಸ್ಥೆಗಳು ಜಂಟಿಯಾಗಿ ಸ್ಕೈ ಸ್ಟ್ರೈಕರ್ ಹೆಸರಿನಲ್ಲಿ ಆತ್ಮಾಹುತಿ ಡ್ರೋನ್ ತಯ್ಯಾರಿಸಿವೆ ಎಂದು ತಿಳಿದುಬಂದಿದೆ.