ಗದಗ : ಜಿಲ್ಲೆಯ ಸುಮಾರು 15ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳ್ಳಂ ಬೆಳಿಗ್ಗೆ ಗದಗ ಸೇರಿದಂತೆ ಗದಗ ತಾಲೂಕಿನ ಸುತ್ತಮುತ್ತಲು ಪೊಲೀಸರು ರೌಡಿಶೀಟರ್ ಗಳ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರ, ಗದಗ ಗ್ರಾಮೀಣ, ನರಗುಂದ, ರೋಣ ಹಾಗು ಲಕ್ಷ್ಮೇಶ್ವರ ಸೇರಿದಂತೆ ಜಿಲ್ಲೆಯ ರೌಡಿ ಶೀಟರ್ ಗಳ ಮನೆಗಳಲ್ಲಿ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬೆಟಗೇರಿ ಜಿಲ್ಲಾ ಕಾರಾಗೃಹದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಗದಗ ಎಸ್ಪಿ ಬಿ.ಎಸ್ ನೇಮಗೌಡರ್ ಮಾಹಿತಿ ನೀಡಿದ್ದಾರೆ.