ಬೆಂಗಳೂರು : ಬೆಂಗಳೂರಿನಲ್ಲಿ ಕರ್ತವ್ಯ ನಿರತ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆದಿದ್ದು, ಬೈಕ್ ಸವಾರನೊಬ್ಬ ಕಪಾಳಕ್ಕೆ ಹೊಡೆದು ಪರಾರಿಯಾಗಿರುವ ಘಟನೆ ಹೆಬ್ಬಾಳ ಸಂಚಾರ ವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಂಬರ್ ಇಲ್ಲದ ಬೈಕ್ ಚಲಾಯಿಸುತ್ತಿದ್ದ ಸವಾರನನ್ನು ಹೋಂ ಗಾರ್ಡ್ ಯಾಕೆ ನಂಬರ್ ಪ್ಲೇಟ್ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಒನ್ ವೇ ಅಲ್ಲಿ ಯುಟರ್ನ್ ತೆಗೆದುಕೊಳ್ಳುತ್ತೇನೆ ಎಂದು ಬೈಕ್ ಸವಾರ ತಿಳಿಸಿದ್ದಾನೆ. ಈ ವೇಳೆ ಹೋಂ ಗಾರ್ಡ್ ಬೈಕ್ ಸವಾರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದದ ವೇಳೆ ಹೋಮ್ ಗಾರ್ಡ್ ಕಪಾಳಕ್ಕೆ ಹೊಡೆದು ಸವಾರ ಪರಾರಿಯಾಗಿದ್ದಾನೆ.
ಮೇ 4ರಂದು ಸಂಜೆ 56 ಸುಮಾರಿಗೆ ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ದೃಶ್ಯ ಬೈಕ್ ಹಿಂದೆ ಇದ್ದ ವಾಹನದ ಕ್ಯಾಮರಾದಲ್ಲಿ ಸರಿಯಾಗಿದೆ. ದೃಶ್ಯವನ್ನು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಪೀಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ ಹೆಬ್ಬಾಳ ಸಂಚಾರ ವಿಭಾಗ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ