ಬೆಂಗಳೂರು : ಕಲಬುರ್ಗಿಯ ಮಹದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಸ್ಟೈಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ದಾಳಿ ವೇಳೆ 81.21 ಕೋಟಿ ರೂ. ದುರುಪಯೋಗಪಡಿಸಿಕೊಂಡಿದ್ದು ಸಾಬೀತಾಗಿದೆ.
ಹೌದು ಈ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕಲಬುರಗಿಯ 7 ಕಡೆ ದಾಳಿ ನಡೆಸಿದ್ದರು. ಹೆಚ್ಕೆಇ ಮಾಜಿ ಅಧ್ಯಕ್ಷ ಭೀಮಾಶಂಕರ್ ಬಿಲ್ಗುಂಡಿ, ಎಮ್ಆರ್ಎಮ್ಸಿ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಎಸ್ ಎಂ ಪಟೇಲ್, ಲೆಕ್ಕಪರಿಶೋಧಕ ಸುಭಾಷ್ ಚಂದ್ರ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು.
ಇದೀಗ ಕಲಬುರ್ಗಿಯ HKE ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗು ಕಾಂಗ್ರೆಸ್ ಮುಖಂಡ ಭೀಮಾಶಂಕರ ಬಿಲಗುಂದಿ, ಎಸ್ ಎಂ ಪಾಟೀಲ್, ಸುಭಾಷ್ ಜಗನ್ನಾಥ್ ಅವರು 282 ಪಿಜಿ ವಿದ್ಯಾರ್ಥಿಗಳ 81.21 ಕೋಟಿ ರೂ. ಹಣವನ್ನು ದುರುಪಯೋಗ ಪಡಿಸಕೊಂಡಿರುವುದು ಇಡಿ ತನಿಖೆ ವೇಳೆ ತಿಳಿದುಬಂದಿದೆ.
ಕಳೆದ 2018 ರಿಂದ 2024 ರ ವರೆಗೆ ಹೈದರಾಬಾದ್ ಶಿಕ್ಷಣ ಸಂಸ್ಥೆಯ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಭೀಮಾಶಂಕರ್ ಬಿಲಗುಂದಿ ವಿರುದ್ಧ ಎಂಆರ್ಎಂಸಿ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸ್ಟೈಫಂಡ್ ಹಗರಣ ಆರೋಪ ಕೇಳಿಬಂದಿತ್ತು. 700 ಜನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸುಮಾರು 80 ಕೋಟಿ ರೂ. ಅಧಿಕ ಹಣ ನೀಡದೆ ವಂಚನೆ ಮಾಡಿರುವ ಆರೋಪ ಇವರ ಮೇಲೆ ಕೇಳಿಬಂದಿತ್ತು.
ವೈದ್ಯಕೀಯ ವಿದ್ಯಾರ್ಥಿಗಳಿಂದ ಖಾಲಿ ಚೆಕ್ಗೆ ಸಹಿ ಮಾಡಿಸಿಕೊಂಡು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿಗಳಿಗೆ ಹಣ ಜಮೆ ಆಗ್ತಿದ್ದಂತೆ ಚೆಕ್ಗಳನ್ನು ಬಳಸಿ ಆರೋಪಿಗಳು ರೀಫಂಡ್ ಮಾಡಿಕೊಳುತ್ತಿದ್ದರು. ಅಕ್ರಮದ ಬಗ್ಗೆ ಕಲಬುರಗಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಈ ಎಫ್ಐಆರ್ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ.
ED, Bengaluru Zonal Office has conducted search operations on 30.04.2025, 01.05.2025 & 03.05.2025 under the provisions of the PMLA, 2002 covering 7 premises situated in Kalaburgi district, including the premises of Bhimashankar Bilgundi, former President of Hydrabad Karnataka…
— ED (@dir_ed) May 5, 2025