ಬೆಂಗಳೂರು : ಜಿಲೇಬಿ, ಶರಬತ್ ಬಳಿಕ ಇದೀಗ ಸಿಹಿತಿನಿಸುಗಳಾದ ಚಾಕೋಲೇಟ್, ಪೆಪ್ಪರ್ ಮೆಂಟ್, ಜೇಮ್ಸ್ ಜೆಲ್ಲಿಗಳಲ್ಲಿ ಕೃತಕ ಬಣ್ಣ, ಕಲಬರಕೆ ನಡೆಯುತ್ತಿದೆ ಎಂದು ಆರೋಪಗಳ ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರ ಗುಣಮಟ್ಟ ಇಲಾಖೆಯು ಪರೀಕ್ಷೆಗೆ ಮುಂದಾಗಿದೆ.
ಹೌದು, ಚಾಕೊಲೇಟ್, ಪೆಪ್ಪರ್ ಮೆಂಟ್, ಜೇಮ್ಸ್, ಜೆಲ್ಲಿಗಳಲ್ಲಿ ಹಾನಿಕಾರಕ ರಾಸಾಯನಿಕ ಕಲರ್ ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಇದೀಗ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್ ಗೆ ಸೂಚನೆ ನೀಡಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಎಫ್ ಎಸ್ ಎಸ್ ಎ ಐ ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಆಹಾರ ಇಲಾಖೆ ಸ್ಯಾಂಪಲ್ ಪಡೆದು ಟೆಸ್ಟ್ ಗೆ ಮುಂದಾಗಿದೆ.
ಇನ್ನೂ ಕಲಬರಕೆ ಸಂಬಂಧ ಜಿಲೇಬಿ, ಶರಬತ್ ಮಾದರಿ ಸಂಗ್ರಹಕ್ಕೆ ಆಹಾರ ಇಲಾಖೆ ಮುಂದಾಗಿದ್ದು, ಪ್ರತಿ ಜಿಲೆಯಲ್ಲೂ ತಲಾ 5 ಮಾದರಿ ಸಂಗ್ರಹಿಸುವಂತೆ ಸೂಚನೆ ನೀಡಿದೆ. ಹೀಗಾಗಿ ವರದಿ ಮೇಲೆ ಜಿಲೇಬಿ ವ್ಯಾಪಾರಿಗಳು ಕಣ್ಣಿಟ್ಟು ಕೂತಿದ್ದಾರೆ. ಜಿಲೇಬಿಗೆ ಕೃತಕ ಬಣ್ಣ ಬಳಕೆ ಬಳಸುತ್ತಿರುವುದು ಕಂಡು ಬಂದಿದ್ದು, ಆಹಾರ ಗುಣಮಟ್ಟ ಇಲಾಖೆ ಗಮನಕ್ಕೆ ಬಂದಿದೆ. ಜೊತೆಗೆ ದಣಿವಾರಿಸುವ ಶರಬತ್ತಿನಲ್ಲೂ ಕೃತಕ ಬಣ್ಣ ಹಾಗೂ ಕಲುಷಿತ ನೀರು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸಕ್ಕರೆ ಮಿಶ್ರಿತ ನೀರನ್ನು ಮುಚ್ಚಿದ ಡಬ್ಬಿಯಲ್ಲಿಸಿದ್ರೆ ಕುಲುಷಿತವಾಗಲಿದೆ ಎನ್ನಲಾಗಿದೆ.