ನವದೆಹಲಿ : ಸೆಕ್ಯೂರಿಟಿ ಗಾರ್ಡ್ ಒಬ್ಬರು ಕಾರಿನ ಚಾಲಕನಿಗೆ ಸುಖಾ ಸುಮ್ಮನೆ ಹಾರ್ನ್ ಮಾಡಬೇಡಿ ಎಂದು ಹೇಳಿದ್ದಾರೆ. ಈ ವೇಳೆ ಚಾಲಕ ಸೆಕ್ಯೂರಿಟಿ ಕಾರ್ಡ್ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಒಂದು ಘಟನೆ ನೈಋತ್ಯ ದೆಹಲಿ ವಸಂತ್ ಕುಂಜ್ ನಲ್ಲಿ ನಡೆದಿದೆ. ಥಾರ್ ಕಾರು ಚಾಲಕನೊಬ್ಬ ಹಾರ್ನ್ ಮಾಡಬೇಡಿ ಎಂದು ಹೇಳಿದ ಭದ್ರತಾ ಸಿಬ್ಬಂದಿ ಮೇಲೆ ಕಾರು ಹರಿಸಿರುವ ಭೀಕರ ಘಟನೆ ನಡೆದಿದೆ.
ಕಾರು ಹರಿದ ಪರಿಣಾಮ ಸಿಬ್ಬಂದಿಯ ಎರಡೂ ಕಾಲುಗಳಲ್ಲಿ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೂಳೆಗಳು ಮುರಿದಿವೆ. ಗಾಯಾಳುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸಂತ್ ಕುಂಜ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಥಾರ್ ಕಾರು ಚಾಲಕನನ್ನು ಪ್ರಸ್ತುತ ಬಂಧಿಸಲಾಗಿದೆ. ಬಂಧಿತ ಥಾರ್ ಚಾಲಕನನ್ನು ರಂಗಪುರಿ ನಿವಾಸಿ ವಿಜಯ್ ಅಲಿಯಾಸ್ ಲಾಲಾ (24) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ?
ಸಂತ್ರಸ್ಥ ಭದ್ರತಾ ಸಿಬ್ಬಂದಿ ರಾಜೀವ್ ಕುಮಾರ್ ತನ್ನ ಕುಟುಂಬದೊಂದಿಗೆ ಮಹಿಪಾಲ್‌ಪುರದಲ್ಲಿ ವಾಸಿಸುತ್ತಿದ್ದಾರೆ. ಅವರು ಮೂಲತಃ ಬಿಹಾರದವರಾಗಿದ್ದು, ದೆಹಲಿ ವಿಮಾನ ನಿಲ್ಜಾಣದಲ್ಲಿ ಟರ್ಮಿನಲ್ 3ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ನಿನ್ನೆ ಕೂಡ ರಾತ್ರಿಪಾಳಿ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ಮಹಿಪಾಲ್‌ಪುರ ಕ್ರಾಸಿಂಗ್‌ನಲ್ಲಿ ಕ್ಯಾಬ್ ಅವನನ್ನು ಇಳಿಸಿದೆ. ಈ ವೇಳೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಥಾರ್ ಕಾರು ಚಾಲಕ ಜೋರಾಗಿ ಹಾರ್ನ್ ಹೊಡೆದಿದ್ದಾನೆ.
ಈ ವೇಳೆ ರಾಜೀವ್ ಕುಮಾರ್ ಥಾರ್ ಕಾರು ಚಾಲಕನಿಗೆ ಹಾರ್ನ್ ಮಾಡದಂತೆ ಗದರಿದ್ದಾನೆ. ಇದರಿಂದ ಆಕ್ರೋಶಗೊಂಡ ಕಾರು ಚಾಲಕ ವಿಜಯ್ ಅಲಿಯಾಸ್ ಲಾಲಾ ಮಾತಿನ ಚಕಮಕಿ ನಡೆಸಿದ್ದಾನೆ. ಬಳಿಕ ನೋಡ ನೋಡುತ್ತಲೇ ಕಾರನ್ನು ಆತನ ಮೇಲೆಯೇ ಹರಿಸಿದ್ದಾನೆ. ಈ ವಿಡಿಯೋ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ರಾಜೀವ್ ಕುಮಾರ್ ಮೇಲೆ ಉದ್ದೇಶ ಪೂರ್ವಕವಾಗಿಯೇ ಚಾಲಕ ವಿಜಯ್ ಹರಿಸಿರುವುದು ಕಂಡುಬಂದಿದೆ.
ख़ौफ़नाक।
सिक्योरिटी गार्ड ने हॉर्न बजाने से मना किया तो चढ़ा दी थार।
वसंत कुंज पुलिस ने आरोपी को किया गिरफ्तार।दिल्ली के महिपालपुर की घटना।@CPDelhi pic.twitter.com/r9TpPhg83x
— Sagar Kumar “Sudarshan News” (@KumaarSaagar) May 5, 2025