ಬೆಂಗಳೂರು : ಕಾರ್ಯಕ್ರಮ ಒಂದರಲ್ಲಿ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿ ಫಿಲಂ ಚೇಂಬರ್ ನಿರ್ಧಾರ ಕೈಗೊಂಡಿತು ಈ ಕುರಿತು ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಸೋನು ನಿಗಮ್ ಅವರನ್ನು ಕನ್ನಡಿಗರ ಕ್ಷಮೆ ಕೇಳುವವರೆಗೂ ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದರು.
ತನ್ನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿರುವ ವಿಚಾರ ತಿಳಿದರೂ ಸಹ ಸೋನು ನಿಗಮ್ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಕನ್ನಡದಿಂದ ಸಹಕಾರ ಬೆನ್ನಲ್ಲೇ ಸೋನು ನಿಗಮ್ ನಾನು ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತಲೂ ಕೂಡ ಕನ್ನಡ ಹಾಡುಗಳನ್ನು ಅತಿ ಹೆಚ್ಚು ಗೌರವದಿಂದ ನೋಡಿದ್ದೇನೆ. ಈ ಮಾತಿಗೆ ಸಾಮಾಜಿಕ ಮಾಧ್ಯಮಗಳಲ್ಲಿನ ವಿಡಿಯೋಗಳು ಸಾಕ್ಷಿ ಎಂದಿದ್ದಾರೆ.
ಕರ್ನಾಟಕದಲ್ಲಿನ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸಿರುತ್ತೇನೆ. ಒಂದು ಗಂಟೆಗೂ ಹೆಚ್ಚು ಕಾಲ ತಯಾರಿಯನ್ನು ನಡೆಸಿರುತ್ತೇನೆ. ಅಂದು ನಾನು ಮೊದಲ ಹಾಡು ಹಾಡಿದ ತಕ್ಷಣ ಪ್ರಚೋದಿಸಿದರು. ನಾನು ಅವರಿಗೆ ತುಂಬಾ ಶಾಂತವಾಗಿ ಪ್ರೀತಿಯಿಂದ ಹೇಳಿದೆ. ಕಾರ್ಯಕ್ರಮ ಈಗ ಶುರುವಾಗಿದೆ ಇದು ನನ್ನ ಮೊದಲ ಹಾಡು. ನಾನು ನಿಮಗೆ ನಿರಾಸೆ ಉಂಟು ಮಾಡುವುದಿಲ್ಲ ಎಂದು ಅವರಿಗೆ ಹೇಳಿದ್ದೆ ಆದರೆ ಅವರು ಗದ್ದಲ ಸೃಷ್ಟಿಸಿ ಬೆದರಿಸುವ ರೀತಿ ವರ್ತಿಸಿದರು.
ಇಲ್ಲಿ ತಪ್ಪು ಯಾರದು ಎಂಬ ನಿರ್ಧಾರವನ್ನು ಕನ್ನಡಿಗರಿಗೆ ಬಿಡುತ್ತೇನೆ. ಯಾವ ತೀರ್ಪು ನೀಡಿದರೂ ಸಹ ಗೌರವದಿಂದ ಸ್ವೀಕರಿಸುತ್ತೇನೆ. ಕರ್ನಾಟಕ ಪೋಲೀಸರ ಮೇಲೆ ಗೌರವ ನಂಬಿಕೆ ಇಟ್ಟುಕೊಂಡಿದ್ದೇನೆ. ಪೊಲೀಸರಿಗೆ ನನ್ನಿಂದ ಬೇಕಾದ ಎಲ್ಲಾ ಸಹಕಾರ ನೀಡುತ್ತೇನೆ. ನಾನು ಕರ್ನಾಟಕದಿಂದ ದೈವಿಕ ಪ್ರೀತಿಯನ್ನು ಪಡೆದಿದ್ದೇನೆ. ನಿಮ್ಮ ತೀರ್ಪು ಏನೇ ಆಗಿದ್ದರು ಸಹ ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದಾರೆ.