ಬೆಂಗಳೂರು : ಇತ್ತೀಚಿಗೆ ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ ಶೆಟ್ಟಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸುಹಾಸ್ ಶೆಟ್ಟಿ ಓರ್ವ ರೌಡಿ ಶೀಟರ್. ಈ ವ್ಯಕ್ತಿ ಈ ಹಿಂದೆ ಓರ್ವ ಹಿಂದೂ ಹಾಗೂ ಓರ್ವ ಮುಸ್ಲಿಮ್ ಯುವಕನನ್ನು ಕೊಲೆ ಮಾಡಿದ್ದಾನೆ ಎಂದು ಅವರು ಆರೋಪಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ರೌಡಿ ಶೀಟರ್, ಒಬ್ಬ ಹಿಂದೂ ಹಾಗೂ ಓರ್ವ ಮುಸ್ಲಿಮ್ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ. ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಹಿಂದೂ ಕಾರ್ಯಕರ್ತ ಅಂದ್ರೆ ಏನರ್ಥ? ಹಿಂದೂ ಎನ್ನುವುದು ಸಂಘಟನೆ ಅಲ್ಲ ಹಿಂದೂ ಒಂದು ಧರ್ಮ. ಹಿಂದೂ ಪರ ಸಂಘಟನೆ ಎಂದು ಹೇಳಿ. ನಾನೂ ಹಿಂದೂವೇ, ಸುಹಾಸ್ ನನ್ನ ಕಾರ್ಯಕರ್ತನಾ? ಎಂದು ಪ್ರಶ್ನಿಸಿದರು.
ರೌಡಿ ಶೀಟರ್ ಕ್ರಿಮಿನಲ್ ಎಲಿಮೆಂಟ್ಸ್ ಗಳು ಕೆಲ ಹಿಂದೂ ಸಂಘಟನೆಗಳನ್ನು ಸೇರಿಕೊಂಡಿದ್ದಾರೆ. ದಂಧೆ ಮಾಡಲು ಬೆಟ್ಟಿಂಗ್ ಮಾಫಿಯಾ ಸ್ಯಾಂಡ್ ಮಾಫಿಯಾ ಮಟ್ಕಾ ದಂಧೆ ನಡೆಸಲು ಸಂಘಟನೆ ಸೇರಿಕೊಂಡಿದ್ದಾರೆ. ಧರ್ಮದ ಹೆಸರು ದುರುಪಯೋಗ ಮಾಡಿಕೊಂಡು ಅನೈತಿಕ ಚಟುವಟಿಕೆ ಮಾಡಲು ರಕ್ಷಣೆ ಆಗುತ್ತಿದೆ ಎಂದು ಆರೋಪಿಸಿದರು.
ಗೃಹ ಇಲಾಖೆ ಆ್ಯಂಟಿ ಕಮ್ಯುನಲ್ ಫೋರ್ಸ್ ಮಾಡುತ್ತದೆ. ಹೇಗಿರಬೇಕು ಎಂಬುದು ಗೃಹ ಇಲಾಖೆ ತೀರ್ಮಾನ ಮಾಡುತ್ತದೆ. ಇದರ ಅವಶ್ಯಕತೆ ಇದೆ, ಪೊಲೀಸರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೋಮುವಾದ ಬಳಸಿಕೊಂಡು ಪ್ರಚೋದನೆ ಮಾಡುವವರ ಮೇಲೆ ಹಿಂಸಾತ್ಮಕ ಕೆಲಸ ಮಾಡುವವರ ಮೇಲೆ ಒಂದು ಕಟುವಾದ ಕೆಲಸ ಕಾರ್ಯ ಆಗಬೇಕು ಇದು ಸಾರ್ವಜನಿಕ ಅಭಿಪ್ರಾಯ, ಇದೆಲ್ಲವನ್ನೂ ನಿಲ್ಲಿಸಬೇಕು ಎಂದರು.