ಬೆಂಗಳೂರು : ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣ ಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದರು. ಈ ಆರೋಪಕ್ಕೆ ದಿನೇಶ್ ಗುಂಡೂರಾವ್ ಆಕ್ರೋಶ ಹೊರ ಹಾಕಿದ್ದು ಇವರ ರಾಜಕೀಯ ಬೇಳೆ ಬೇಯಿಸಿಕೊಳ್ಳೋದಕ್ಕೆ ಯಾರ್ಯಾರು ಸಾಯ್ತಿದ್ದಾರೆ ಎಂದು ಆಕ್ರೋಶ ಅವರ ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಛಲವಾದಿ ನಾರಾಯಣ ಸ್ವಾಮಿ ಏನೇನೋ ಮಾತಾಡ್ತಾರೆ. ನಿಮ್ಮ ರಾಜಕೀಯ ಲಾಭಕ್ಕೋಸ್ಕರ ಉಪಯೋಗಿಸಲು ಹೋದ್ರೆ ಕೊನೆಯಲ್ಲಿ ಸಮಸ್ಯೆ ಅನುಭವಿಸುವವರು ಯಾರು? ಇವರ ರಾಜಕಾರಣ ಬೇಳೆ ಬೇಯಿಸಿಕೊಳ್ಳಲು ಕೊನೆಗೆ ಯಾರು ಯಾರೋ ಸಾಯ್ತಿದ್ದಾರೆ. ಅಧಿಕಾರ ರಾಜಕಾರಣಕ್ಕೋಸ್ಕರ ಯಾರು ಯಾರೋ ತ್ಯಾಗ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆ್ಯಂಟಿ ಕಮ್ಯುನಲ್ ಫೋರ್ಸ್ ಕೂಡ ಅನುಷ್ಟಾನಕ್ಕೆ ತರುತ್ತೇವೆ. ದಕ್ಷಿಣ ಕನ್ನಡ ಹೀಗೇ ಆದರೆ ಯಾರು ಬಂಡವಾಳ ಹೂಡಿಕೆ ಬರುತ್ತಾರೆ? ಈ ರೀತಿ ಹೇಳಿಕೆ ಈ ತರಹ ರಾಜಕಾರಣ ಮಾಡಿದರೆ ಇವರ ಉದ್ದೇಶ ಏನು? ಇದೇ ತರಹ ಗಲಾಟೆ ಎಬ್ಬಿಸಬೇಕು, ಇದೇ ತರಹ ಹತ್ತು ಹೆಣ ಬೀಳಬೇಕು ಎಂಬುದು ಇವರ ಉದ್ದೇಶವಾ? ಎಂದು ಪ್ರಶ್ನಿಸಿದರು.