ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (KPSC) ದಿಂದ ಆಗಾಗ ಯಡವಟ್ಟುಗಳು ಆಗುತ್ತಿರುತ್ತವೆ. ಇದೀಗ ಇಂದು ಕೆಎಎಸ್ ಪರೀಕ್ಷೆಯ ವೇಳೆ, ಪರೀಕ್ಷಾ ಕೊಠಡಿಗೆ ಬರುವ ಮೊದಲೇ ಪ್ರಶ್ನೆ ಪತ್ರಿಕೆಗಳ ಬಂಡಲ್ ಓಪನ್ ಆಗಿರಬೇಕು ಅಭ್ಯರ್ಥಿಗಳು ಗಂಭೀರವಾದ ಆರೋಪ ಮಾಡಿದ್ದಾರೆ.
ಹೌದು ಕೆಪಿಎಸ್‌ಸಿ ಇಂದ ಮತ್ತೆ ಯಡವಟ್ಟು ಆಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಆರೋಪ ಕೇಳಿ ಬಂದಿದೆ. ಇಂದು ನಡೆದಿರುವ ಎರಡನೇ ದಿನದ KAS ಮುಖ್ಯ ಪರೀಕ್ಷೆ ವೇಳೆ ಪರೀಕ್ಷೆಯ ಪ್ರಬಂಧ ಬರವಣಿಗೆ ಪತ್ರಿಕೆ ಓಪನ್ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಪರೀಕ್ಷೆಯ ಕೊಠಡಿಗೆ ಬರುವ ಬಂಡಲ್ ಓಪನ್ ಆಗಿರುವ ಆರೋಪ ಇದೀಗ ಕೇಳಿಬರುತ್ತಿದೆ.
ಕೊಠಡಿಗೆ ಬರುವ ಮೊದಲೇ ಪ್ರಶ್ನೆ ಪತ್ರಿಕೆಯ ಬಂಡಲ್ ಓಪನ್ ಆಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೆಪಿಎಸ್ಸಿ ಅಭ್ಯರ್ಥಿಗಳು ಗಂಭೀರವಾದ ಆರೋಪ ಮಾಡಿದ್ದಾರೆ. ಬೆಂಗಳೂರಿನ ಕಸ್ತೂರಬಾ ನಗರದ ಬಿಬಿಎಂಪಿ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತ್ತು ರೂಮ್ ನಂಬರ್ 6 ರಲ್ಲಿ ಒಂದು ಬಂಡಲ್ ಓಪನ್ ಮಾಡಲಾಗಿದೆ. ಎರಡು ಕವರ್ಗಳ ಪೈಕಿ ಒಂದು ಕವರ್ ಓಪನ್ ಆಗಿರುವ ಆರೋಪ ಕೇಳಿ ಬಂದಿದೆ. ರೂಮ್ ನಂಬರ್ 4 ಮತ್ತು 6 ರಲ್ಲಿ ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಮಾಡಿರುವ ಆರೋಪ ಕೇಳಿ ಬಂದಿದೆ.