ಬೆಂಗಳೂರು : ಬೆಂಗಳೂರಿನಲ್ಲಿ ಏಕಾಏಕಿ ನಿಗೂಢವಾದ ಸ್ಪೋಟದಿಂದ ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಬನಹಳ್ಳಿ ಎಂಬಲ್ಲಿ ನಿಗೂಢವಾದ ಸ್ಪೋಟ ಸಂಭವಿಸಿದೆ.
ಹೌದು ಚಂದಾಪುರ ಸಮೀಪದ ಬನಹಳ್ಳಿಯಲ್ಲಿ ಸ್ಪೋಟಗೊಂಡಿದ್ದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನಹಳ್ಳಿ ಎಂಬಲ್ಲಿ ನಿಗೂಢ ಸ್ಫೋಟದಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಸ್ಪೋಟದ ತೀವ್ರತೆಗೆ ಕಾಂಕ್ರೀಟ್ ರಸ್ತೆ ಪೀಸ್ ಆಗಿದೆ. 100 ಮೀಟರ್ ದೂರಕ್ಕೆ ಕಾಂಕ್ರೀಟ್ ಮತ್ತು ಜಲ್ಲಿಕಲ್ಲು ಸಿಡಿದು ಬಿದ್ದಿದೆ.
ನೀರಿನ ಟ್ಯಾಂಕರ್ ಹೋದ ಕೆಲ ಹೊತ್ತಿನಲ್ಲಿಯೇ ಈ ಒಂದು ಸ್ಪೋಟ ಸಂಭವಿಸಿದೆ. ನಿಗೂಢ ಸ್ಫೋಟದ ತೀವ್ರತೆಗೆ ಬೆಂಕಿ ಸಹ ಹೊತ್ತಿಕೊಂಡಿದೆ. ಆತಂಕಗೊಂಡು ಮನೆಯ ಒಳಗಡೆ ಸ್ಥಳೀಯರು ಓಡಿದ್ದಾರೆ. ಈ ನಿಗೂಢವಾದ ಸ್ಪೋಟಕ್ಕೆ ಇದುವರೆಗೂ ಕಾರಣ ತಿಳಿದು ಬಂದಿಲ್ಲ.