ಕಲಬುರ್ಗಿ : ಕಲಬುರ್ಗಿಯಲ್ಲಿ ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಗಳ ವಿರುದ್ಧ FIR ದಾಖಲಾಗಿದೆ. ಸಿಬ್ಬಂದಿಗಳಾದ ಶರಣಗೌಡ ಮತ್ತು ಗಣೇಶ್ ವಿರುದ್ಧ ಪರೀಕ್ಷಾರ್ಥಿ ಶ್ರೀಪಾದ ಪಾಟೀಲ್ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ ಎಂದು ಕಲ್ಬುರ್ಗಿ ನಗರ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಹೇಳಿಕೆ ನೀಡಿದರು.
ನಿನ್ನೆ ಕಲಬುರ್ಗಿಯ ಸೆಂಟ್ ಮೇರಿ ಶಾಲೆಯಲ್ಲಿ ನೀಟ್ ಪರೀಕ್ಷೆ ಇತ್ತು ಈ ವೇಳೆ ಅಧಿಕಾರಿಗಳು ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಗೆ ಶನಿವಾರ ತೆಗೆದು ಒಳಗಡೆ ಹೋಗು ಎಂದು ಸೂಚನೆ ನೀಡಿದರು ಬ್ರಾಹ್ಮಣ ಸಂಘಟನೆ ಪರೀಕ್ಷಾ ಕೇಂದ್ರದ ಮುಂದೆ ಬೃಹತ್ ಪ್ರತಿಭಟನೆ ನಡೆಸಿತು ವಿದ್ಯಾರ್ಥಿ ಪರೀಕ್ಷೆ ಬರೆದ ಬಳಿಕ ಆತನಿಗೆ ಅಲ್ಲಿಯೇ ಶಾಸ್ತ್ರೋಕ್ತವಾಗಿ ಮತ್ತೆ ಜನಿವಾರ ಧಾರಣೆ ಮಾಡಲಾಯಿತು.
ಪರೀಕ್ಷೆ ಬರೆದು ಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರೀಪಾದ್ ಪಾಟೀಲ್ ಅಧಿಕಾರಿಗಳ ಸೂಚನೆಯ ಮೇರೆಗೆ ನಾನು ಜನಿವಾರ ತೆಗೆದು ಪರೀಕ್ಷೆ ಬರೆಯಲು ತೆರಳಿದ್ದೇ ಆದರೆ ಇದರಿಂದ ಮಾನಸಿಕವಾಗಿ ನೊಂದಿದ್ದು ಪರೀಕ್ಷೆಯಲ್ಲಿ ರೂಲ್ ನಂಬರ್ ಸಹ ತಪ್ಪಾಗಿ ಬರೆದಿದ್ದೇನೆ. ಹಾಗಾಗಿ ನನಗೆ ಫ್ರೀಯಾಗಿ ಸೀಟ್ ಬೇಕು ಎಂದು ಆಗ್ರಹಿಸಿದ್ದಾನೆ.
ಬಳಿಕ ಬ್ರಾಹ್ಮಣ ಮುಖಂಡರೊಂದಿಗೆ ಶ್ರೀಪಾದ್ ಪಾಟೀಲ್ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾನೆ.ಇದೀಗ ಪರೀಕ್ಷಾರ್ಥಿ ದೂರಿನ ಅನ್ವಯ ಶರಣಗೌಡ ಹಾಗೂ ಗಣೇಶ್ ಎನ್ನುವ ಇಬ್ಬರು ಸಿಬ್ಬಂದಿಗಳ ವಿರುದ್ಧ FIR ದಾಖಲಾಗಿದೆ ಎಂದು ಕಲ್ಬುರ್ಗಿ ಕಮಿಷನರ್ ಡಾ.ಶರಣಪ್ಪ ತಿಳಿಸಿದರು.