ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಘೋರವಾದ ದುರಂತ ನಡೆದಿದ್ದು, ಏಕಾಏಕಿ ನಾಡಕಚೇರಿಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಾಡಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ.
ಮೇಲ್ಛಾವನಿ ಏಕಾಏಕಿ ಕುಸಿದು ಬೀಳುತ್ತಿದ್ದಂತೆ ಕಚೇರಿಯಲಿದ್ದ ಅಧಿಕಾರಿಗಳು ಮತ್ತು ಪತಿಗಳು ಕಚೇರಿಯಿಂದ ತಕ್ಷಣ ಹೊರಗಡೆ ಓಡಿ ಬಂದಿದ್ದಾರೆ. ನಾಡ ಕಚೇರಿಯಲ್ಲಿದ್ದ ಉಪಕರಣಗಳು ಮತ್ತು ಕಂಪ್ಯೂಟರ್ ಸಂಪೂರ್ಣವಾಗಿ ಪೀಸ್ ಪೀಸ್ ಗಳಾಗಿವೆ. ಕಚೇರಿ ಒಳಗಿನ ಹೆಂಚುಗಳು ಎಲ್ಲಾ ಚೆಲ್ಲಾ ಪಿಲ್ಲಿಯಾಗಿ ಬಿದ್ದಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಜಯಪುರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.