ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಗೌರವದ ದುರಂತ ಒಂದು ಸಂಭವಿಸಿದ್ದು ನೀರು ಕುಡಿಯಲು ಹೊಂಡಕ್ಕೆ ತೆರಳಿದ ವೇಳೆ ಕಾಲು ಜಾರಿ ಹೊಂಡಕ್ಕೆ ಬಿದ್ದು ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ಅಂಚೋಲಾ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಅಂಚೋಲಾ ತಂಡದ ನಿವಾಸಿಗಳಾದ ಅಮರ್ (12) ಜಯ ರಾಠೋಡ್ (14) ಮತ್ತು ಕೃಷ್ಣ ರಾಠೋಡ್ (10) ಮೃತ ಬಾಲಕರು ಎಂದು ತಿಳಿದುಬಂದಿದೆ. ಕುರಿ ಕಾಯಲು ಹೋಗಿದ್ದಾಗ ನೀರು ಕುಡಿಯಲು ಹೊಂಡಕ್ಕೆ ಹೋಗಿದ್ದರು ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಮೂವರು ಬಾಲಕರು ಸಾವನಪ್ಪಿದ್ದಾರೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.