ಶಿವಮೊಗ್ಗ: ಕೇಂದ್ರ ಲೋಕಸೇವಾ ಆಯೋಗ ನಡೆಸಿದಂತ ಐಎಎಸ್ ಪರೀಕ್ಷೆಯಲ್ಲಿ 288ನೇ ಶ್ರೇಯಾಂಕದಲ್ಲಿ ಸಾಗರದ ವಿಕಾಸ್ ತೇರ್ಗಡೆಯಾಗಿದ್ದರು. ಈ ಮೂಲಕ ಐಎಎಸ್ ಪಾಸ್ ಮಾಡಿದ್ದರು. ಇಂತಹ ವಿಕಾಸ್ ಗೆ ಸಾಗರ ನಗರಸಭೆ ವತಿಯಿಂದ ಮೇ.5ರ ನಾಳೆ ನಾಗರೀಕ ಸನ್ಮಾನ ಮಾಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಸಾಗರ ನಗರಸಭೆ ಕಮೀಷನರ್ ಹೆಚ್.ಕೆ ನಾಗಪ್ಪ ಅವರು, ಸಾಗರ ನಗರದಲ್ಲಿ ಪ್ರಪ್ರಥಮ ಬಾರಿಗೆ ಯುಪೆಸ್ಸಿ ಪರೀಕ್ಷೆಯಲ್ಲಿ 288ನೇ ಶ್ರೇಯಾಂಕದಲ್ಲಿ ಐಎಎಸ್ ಅಧಿಕಾರಿಯಾಗಿ ನಮ್ಮೂರಿನ ವಿಕಾಸ್.ವಿ ಆಯ್ಕೆಯಾಗಿದ್ದಾರೆ. ಅವರಿಗೆ ಸಾಗರ ಜನತೆಯ ಪರವಾಗಿ ನಗರಸಭೆ ವತಿಯಿಂದ ನಾಗರೀಕ ಸನ್ಮಾನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೇ.5ರ ನಾಳೆ ಬೆಳಗ್ಗೆ 11 ಗಂಟೆಗೆ ಸಾಗರದ ಪುರಭವನದಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿರುವಂತ ವಿಕಾಸ್.ವಿ ಅವರನ್ನು ಸನ್ಮಾನಿಸಲಾಗುತ್ತದೆ. ಸಾಗರ ತಾಲ್ಲೂಕಿನ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ನಮ್ಮೂರಿನ ಹೆಮ್ಮೆಯ ಪುತ್ರ ವಿಕಾಸ್.ವಿ ಅಭಿನಂದಿಸುವಂತೆ ಕೋರಿದ್ದಾರೆ.
ಮೊದಲ ಪ್ರಯತ್ನದಲ್ಲೇ ‘UPSC’ ತೇರ್ಗಡೆ: 288ನೇ Rank ಗಳಿಸಿದ ‘ಸಾಗರದ ವಿಕಾಸ್’
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ವಿಕಾಸ್ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದಂತ ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆ 2024ರಲ್ಲಿ ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದರು.
ಯುಪಿಎಸ್ಸಿ ಪರೀಕ್ಷಾ ತರಬೇತಿಗಾಗಿ ದೆಹಲಿಗೆ ತೆರಳಿದ್ದಂತ ಅವರು, ತರಬೇತಿಯ ಬಳಿಕ ಅಲ್ಲಿಯೇ ಪರೀಕ್ಷೆಯನ್ನು ಬರೆದಿದ್ದರು. ಎಪ್ರಿಲ್.22, 2025ರಂದು ಪ್ರಕಟವಾದಂತ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶದಲ್ಲಿ 288ನೇ Rank ಪಡೆಯುವ ಮೂಲಕ ಮೊದಲ ಪ್ರಯತ್ನದಲ್ಲೇ ಐಎಎಸ್ ಪಾಸ್ ಮಾಡಿದ್ದರು.
ಅಂದಹಾಗೇ ವಿಕಾಸ್ ಸಾಗರದ ಎನ್ ಜಿ ಎನ್ ಪೈ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದರೇ, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಇಂಜಿನಿಯರಿಂಗ್ ವ್ಯಾಸಂಗವನ್ನು ಮೈಸೂರಿನ ಎನ್ ಐ ಕಾಲೇಜಿನಲ್ಲಿ ಇ ಅಂಡ್ ಇ ಕೋರ್ಸ್ ಮೂಲಕ ಮುಗಿಸಿದ್ದರು. ಸಾಗರದ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಜಯೇಂದ್ರ ಪಾಟೀಲ್ ಹಾಗೂ ಶಿಕ್ಷಕಿ ಮಹಾಲಕ್ಷ್ಮೀ ಹೆಗಡೆ ಅವರ ದಂಪತಿಗಳ ಪುತ್ರರಾಗಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಅಲ್ಲವೆಂದು ಸಾಬೀತಾದ್ರೆ, ರಾಜೀನಾಮೆಗೆ ಸಿದ್ಧ: ಛಲವಾದಿ ನಾರಾಯಣಸ್ವಾಮಿ ಸವಾಲ್
Property Law: ತಂದೆಯ ಆಸ್ತಿಯಲ್ಲಿ ಯಾರಿಗೆಲ್ಲ ಪಾಲು ಇದೆ? ಕಾನೂನು ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ